ಇದೀಗ ಭಾರತದಲ್ಲಿ ಐಪಿಎಲ್ ಮ್ಯಾಚ್ ನಡೆಯುತ್ತಿದ್ದು ವಿಶ್ವದೆಲ್ಲೆಡೆ ಕ್ರಿಕೆಟ್ ಅಭಿಮಾನಿಗಳು ಪ್ರತಿನಿತ್ಯ ಉತ್ಸಾಹದಿಂದ ಪಂದ್ಯ ವೀಕ್ಷಿಸುತ್ತಿದ್ದಾರೆ. ಈ ಮಧ್ಯೆ ಕಳೆದ ವರ್ಷದ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಆಟಗಾರನಾಗಿದ್ದ ಕ್ರಿಕೆಟಿಗ ಶಿವಾಲಿಕ್ ಶರ್ಮಾ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ.
ಎಂಗೇಜ್ಮೆಂಟ್ ಗೂ ಮುನ್ನ ಶಿವಾಲಿಕ್ ಶರ್ಮಾ ತನ್ನೊಂದಿಗೆ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ ಎಂದು ಯುವತಿಯೋರ್ವಳು ಆರೋಪಿ ಮಾಡಿದ್ದಾಳೆ.
ಅನೇಕ ಬೆಳವಣಿಗೆಯ ನಂತರ ಯುವತಿ ಪೊಲೀಸರ ಬಳಿ ಹೋಗಿ ಎಫ್ಐಆರ್ ದಾಖಲಿಸಿದ್ದಾರೆ. ಈ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶಿವಾಲಿಕ್ ಶರ್ಮ ಕಳೆದ ವರ್ಷ ಐಪಿಎಲ್ ತಂಡದ ಮುಂಬೈ ಇಂಡಿಯನ್ಸ್ ಪರ ಆಡಿದ್ದರು.

