ಮಂಗಳೂರು: ದ.ಕ ಜಿಲ್ಲಾ ಬಂದ್ ಗೆ ಕರೆ ನೀಡಿ ಕೋಮುಸಂಘರ್ಷಕ್ಕೆ ಪ್ರಚೋದನೆ ನೀಡಿದ ಆರೋಪದಲ್ಲಿ ಹಿಂದೂ ಮುಖಂಡ ಶರಣ್ ಪಂಪ್ವೆಲ್ ಅವರನ್ನು ಬಂಧಿಸಲಾಗಿತ್ತು. ಇದೀಗ ಶರಣ್ ಪಂಪ್ವೆಲ್ ಜೊತೆಗೆ ಆರೋಪ ಹೊತ್ತ ಪ್ರತಿಯೊಬ್ಬರನ್ನೂ ಅರೆಸ್ಟ್ ಮಾಡಬೇಕು ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು ದ್ವೇಷ ಭಾಷಣ ಮಾಡಿದ ಸಂಘ ಪರಿವಾರದ ನಾಯಕರ ವಿರುದ್ಧ ಆಪಾದನೆ ಹೊರಿಸಿ ಪ್ರಕರಣ ದಾಖಲಿಸಿ ಸುಮ್ಮನೆ ಬಿಡಲಾಗಿತ್ತು.
ಸರ್ಕಾರದ ನಿಲುವಿನ ಲಾಭ ಪಡೆದು ಹಿಂದೂ ನಾಯಕರು ಕೋಮುಸಂಘರ್ಷಕ್ಕೆ ಪ್ರಚೋದಿಸುವವರಿಗೆ ಸರಿಯಾದ ಬುದ್ಧಿ ಕಲಿಸಬೇಕು. ಈಗಾಗಲೇ ಪ್ರಕರಣ ದಾಖಲಾಗಿರುವ ಸಂಘ ಪರಿವಾರದ ನಾಯಕರನ್ನು ಕಾಲಾವಕಾಶ ನೀಡದೆ ತಕ್ಷಣ ಬಂಧಿಸಬೇಕು ಎಂದು ರೊಚ್ಚಿಗೆದ್ದರು.

