ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ಮುದ್ದೂರಿನ ಪ್ರಕೃತಿ ಪ್ರಶಾಂತ ವಾತಾವರಣದಲ್ಲಿ ತಲೆ ಎತ್ತಿ ನಿಂತಿರುವ ಹೆಮ್ಮೆಯ ವಿದ್ಯಾಸಂಸ್ಥೆ ವಿ.ಎಸ್.ಎಸ್ ಆಂಗ್ಲ ಮಾಧ್ಯಮ ಶಾಲೆ.
`ಗುಣಮಟ್ಟದ ಶಿಕ್ಷಣ ಬರೀ ಮಾತಲ್ಲ, ಇದು ನಮ್ಮ ಸಂಕಲ್ಪ’ ಎನ್ನುವ ಧ್ಯೇಯ ವಾಕ್ಯದೊಂದಿಗೆ ಪ್ರತೀ ವರ್ಷ ಶೈಕ್ಷಣಿಕ ಸಾಧನೆಗೈಯ್ಯುವುದನ್ನೇ ಮೂಲ ಗುರಿಯಾಗಿಸಿಕೊಂಡು ಸಾಗುತ್ತಿರುವ ಈ ಶಿಕ್ಷಣ ಸಂಸ್ಥೆ ಸುಸಜ್ಜಿತ ಕಟ್ಟಡ, ನುರಿತ ಅನುಭವಿ ಅಧ್ಯಾಪಕರು, ಸ್ಮಾರ್ಟ್ ಕ್ಲಾಸ್, ಸುಸಜ್ಜಿತ ಕ್ರೀಡಾಂಗಣ ಮತ್ತು ವ್ಯವಸ್ಥಿತ ಗ್ರಂಥಾಲಯವನ್ನೊಳಗೊಂಡಿದೆ. ದಾಖಲಾತಿ ಪ್ರಕ್ರಿಯೆ ಮುಂದುವರೆಯುತ್ತಿದ್ದು ಪೋಷಕರು ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕೆ ಇಲ್ಲಿ ಅಡ್ಮಿಷನ್ ಮಾಡಿಸಬಹುದು.

ಕೇವಕ ಶಿಕ್ಷಣಕ್ಕೆ ಮಾತ್ರ ಪ್ರಾಮುಖ್ಯತೆ ನೀಡದೆ ಕ್ರೀಡೆ, ಕರಾಟೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೂ ವಿಶೇಷವಾಗಿ ಪ್ರೋತ್ಸಾಹ ನೀಡಲಾಗುತ್ತದೆ. ಈ ಮುಖೇನ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಸಂಸ್ಥೆ ಪೂರಕ ವಾತಾವರಣವನ್ನು ಕಲ್ಪಿಸುತ್ತಿದೆ.
ವಿದ್ಯಾಸಂಸ್ಥೆಯ ಎಸ್ಸೆಸೆಲ್ಸಿ ಪ್ರಥಮ ಬ್ಯಾಚ್ ವಿದ್ಯಾರ್ಥಿಗಳು ದಾಖಲಿಸಿರುವ ನೂರು ಶೇಕಡ ಫಲಿತಾಂಶವೇ ಇವರ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಕೈಗನ್ನಡಿಯಾಗಿದೆ. ತಂತ್ರಜ್ಞಾನವನ್ನೊಳಗೊಂಡ ಶಿಕ್ಷಣ, ಶಾಲಾ ಮಕ್ಕಳಿಗೆ ವಾಹನ ವ್ಯವಸ್ಥೆ, ಐದರಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಉತ್ತಮ ಆಹಾರ, ಸುಸಜ್ಜಿತ ಕೊಠಡಿ ಸಮೇತ ಹಾಸ್ಟೆಲ್ ವ್ಯವಸ್ಥೆ ಕೂಡಾ ಲಭ್ಯವಿದೆ.
ನರ್ಸರಿಯಿಂದ ಹತ್ತನೇ ತರಗತಿಯವರೆಗೆ ಇಲ್ಲಿ ದಾಖಲಾತಿ ಮಾಡಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಸಂಸ್ಥೆಯ ಮುಖ್ಯ ಕಛೇರಿಯ 0820-2989789 ಈ ನಂಬರನ್ನು ಅಥವಾ 9482481648 ಇದನ್ನು ಸಂಪರ್ಕಿಸಿ.
ಪ್ರಾಂಶುಪಾಲರು- 7795116935
ಇಮೇಲ್ ಐಡಿ- vsscbsc2025@gmail.com
ವೆಬ್ಸೈಟ್- http://www.vssemsmuddur.in
ಮುದ್ದೂರು, ನಾಲ್ಕೂರು ಗ್ರಾಮ, ಬ್ರಹ್ಮಾವರ ತಾಲ್ಲೂಕು, ಉಡುಪಿ ಜಿಲ್ಲೆ…


