ಬೇಸಿಗೆ ಕಾಲದಲ್ಲಿ ಸೂರ್ಯನ ಪ್ರಖರ ಕಿರಣಗಳಿಂದಾಗಿ ಧಗಧಗಿಸುವ ಸೆಕೆಯಿರುತ್ತದೆ. ಹೀಗಿರುವಾಗ ತಂಪು ಪಾನೀಯಗಳು ಬೇಕೆನಿಸುವುದು ಸಹಜ. ಈ ಸಂದರ್ಭ ನಾವು ಕೋಲ್ಡ್ ಡ್ರಿಂಕ್ಸ್ ಅಥವಾ ಎಳನೀರು ಅಥವಾ ಇನ್ನಿತರ ಹಣ್ಣು ಹಂಪಲಿನ ಜ್ಯೂಸ್ ಗೆ ಮೊರೆ ಹೋಗುತ್ತೇವೆ. ಅದರಲ್ಲೂ ನೈಸರ್ಗಿಕವಾದ ಎಳನೀರು ಅಥವಾ ಕಬ್ಬಿನ ಜ್ಯೂಸ್ ದೇಹವನ್ನು ಹೈಡ್ರೇಟ್ ಆಗಿ ಇಡುವುದರ ಜೊತೆಗೆ ದೇಹವನ್ನು ತಂಪಾಗಿಡಲು ಸಹಾಯ ಮಾಡುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ದೇಹಕ್ಕೆ ಎಳನೀರು ಉತ್ತಮನಾ ಅಥವಾ ಕಬ್ಬಿನ ಜ್ಯೂಸಾ ಎನ್ನುವಂತಹ ಪ್ರಶ್ನೆ ಎದುರಾಗಬಹುದು.
ಎಳನೀರಿನಲ್ಲಿ ಕ್ಯಾಲೋರಿ ಪ್ರಮಾಣ ಮತ್ತು ಸಕ್ಕರೆ ಅಂಶ ಕಡಿಮೆ ಇರುತ್ತದೆ. ಇದು ದೇಹದ ಎಲೆಕ್ಟ್ರೋಲೈಟ್ ಸಮತೋಲನವನ್ನು ಸಮತೋಲನವನ್ನು ಕಾಪಾಡುತ್ತದೆ.
ಕಬ್ಬಿನ ನೀರಿಗೆ ಹೋಲಿಸಿದರೆ ಎಳನೀರು ಹೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಹೊಟ್ಟೆಯುಬ್ಬರ, ಆಸಿಡಿಟಿಯಂತಹ ತೊಂದರೆಗಳನ್ನು ಕೂಡಾ ನಿವಾರಣೆ ಮಾಡುತ್ತದೆ.
ಇನ್ನು ಕಬ್ಬಿನ ಜ್ಯೂಸಿನಲ್ಲಿ ನೈಸರ್ಗಿಕ ಸಕ್ಕರೆ ಅಂಶವಿದ್ದು ಆಯಾಸವಾದಾಗ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಕಬ್ಬಿನ ಜ್ಯೂಸ್ ಕೂಡಾ ದೇಹವನ್ನು ತಂಪಾಗಿರಿಸುತ್ತದೆ. ಇದರಲ್ಲಿ ವಿಟಮಿನ್ ಸಿ, ಖನಿಜಗಳು ಮತ್ತು ಇತರ ಫೋಷಕಾಂಶಗಳಿವೆ. ಇದು ಚರ್ಮದ ಆರೋಗ್ಯವನ್ನು ಕೂಡಾ ಕಾಪಾಡುತ್ತದೆ.

