ಸುಬ್ರಹ್ಮಣ್ಯ: ಕನ್ನಡ ಚಿತ್ರರಂಗದ ನಟ ಧ್ರುವ ಸರ್ಜಾ ಅವರು ತನ್ನ ಕುಟುಂಬದ ಸಮೇತ ದ.ಕ ಜಿಲ್ಲೆಯ ಧರ್ಮಸ್ಥಳ, ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಶೂಟಿಂಗ್ ನಿಂದ ಸ್ವಲ್ಪ ಬ್ರೇಕ್ ಪಡೆದುಕೊಂಡಿರುವ ಅವರು ಪತ್ನಿ ಪ್ರೇರಣಾ ಜೊತೆ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಉಜಿರೆಯ ಸುರ್ಯ ದೇಗುಲಕ್ಕೆ ಭೇಟಿ ನೀಡಿದ್ದಾರೆ.
ಕ್ಷೇತ್ರದ ವತಿಯಿಂದ ದಂಪತಿಯನ್ನು ಗೌರವಿಸಲಾಯಿತು. ಧ್ರುವ ಸರ್ಜಾ ನಟನೆಯ ಜೋಗಿ ಪ್ರೇಮ್ ನಿರ್ದೇಶನದ ಕೆಡಿ ಸಿನಿಮಾ ರಿಲೀಸ್ ಗೆ ಪ್ರೇಕ್ಷಕರು ಎದುರು ನೋಡುತ್ತಿದ್ದಾರೆ.

