ಚಿಕ್ಕಮಗಳೂರು: ಉಗ್ರರ ವಿರುದ್ಧ ಸಮರ್ಥವಾಗಿ ಹೋರಾಡಲು, ಅವರನ್ನು ನಾಶ ಮಾಡಲು ಪೂರಕವಾಗುವಂತೆ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದಿಂದ ಭಾರತೀಯ ಸೇನೆಗೆ ಹತ್ತು ಲಕ್ಷ ರೂ ದೇಣಿಗೆ ನೀಡಲಾಗಿದೆ.
ಕಳಸದ ಕಾರ್ಣಿಕ ಕ್ಷೇತ್ರ ಅನ್ನಪೂರ್ಣೇಶ್ವರಿ ದೇಗುಲದಿಂದ ಹಣವನ್ನು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಅವರಿಗೆ ಹಸ್ತಾಂತರ ಮಾಡಲಾಗಿದೆ. ಸೇನೆಗೆ ಇದರಿಂದ ಪ್ರಯೋಜನವಾಗಲಿ ಎಂಬ ಸದುದ್ದೇಶದಿಂದ ದೇಣಿಗೆ ಹಸ್ತಾಂತರಿಸಿ ದೇಗುಲದ ಸಮಿತಿ ದೇಶಪ್ರೇಮ ಮೆರೆದಿದೆ.
ಕ್ಷೇತ್ರದ ಧರ್ಮಕರ್ತರ ಕಂಚಿನ ಪುತ್ಥಳಿ ಅನಾವರಣದ ಕಾರ್ಯಕ್ರಮದಲ್ಲಿ ಧರ್ಮಕರ್ತ ಭೀಮೇಶ್ವರ ಜೋಶಿ ಅವರು ಚೆಕ್ ಹಸ್ತಾಂತರಿಸಿದರು.

