ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಪಾಪಿ ಪಾಕಿಸ್ತಾನ ಕ್ಯಾತೆ ತೆಗೆದಿದ್ದು, ಕದನ ವಿರಾಮ ಉಲ್ಲಂಘಿಸಿದೆ.
ಭಾರತ ಪಾಕಿಸ್ತಾನ ನಡುವೆ ತಕ್ಷಣದಿಂದಲೇ ಕದನ ವಿರಾಮ ಜಾರಿ ಎಂದು ಘೋಷಿಸಿದ ಅಮೆರಿಕ ಅಧ್ಯಕ್ಷ ಟ್ರಂಪ್ ಭಾರೀ ಮುಖಭಂಗ ಅನುಭವಿಸಿದ್ದಾರೆ.
ಶ್ರೀನಗರ ಸೇರಿದಂತೆ ಪಾಕಿಸ್ತಾನದ ಗಡಿಗೆ ಹೊಂದಿಕೊಂಡಿರುವ ನಾಲ್ಕು ರಾಜ್ಯಗಳ ಮೇಲೆ ಪಾಕಿಸ್ತಾನ ಡ್ರೋನ್ ದಾಳಿ ನಡೆಸಿದ್ದು ಭಾರೀ ಸ್ಫೋಟ ಸಂಭವಿಸಿದೆ.
ಭಾರತೀಯ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಆಕ್ಟೀವ್ ಆಗಿದ್ದು ಜಮ್ಮು ಒಂದರಲ್ಲೇ ಹತ್ತು ಡ್ರೋನ್ ಗಳನ್ನು ಹೊಡೆದುರುಳಿಸಿದೆ.

