ಬೆಂಗಳೂರು: ಪಹಲ್ಗಾಮ್ ನಲ್ಲಿ ನಡೆದ ದಾಳಿಗೆ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂಧೂರ ಮುಖೇನ ಉಗ್ರ ನೆಲೆಗಳನ್ನು ಬಗ್ಗುಬಡಿದಿದೆ. ಇದೀಗ ಭಾರತ-ಪಾಕ್ ನಡುವೆ ಯುದ್ಧದ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆ ರಾಜ್ಯದ ಪೊಲೀಸರಿಗೆ ಹೆಚ್ಚುವರಿ ರಜೆಯನ್ನು ರದ್ದುಗೊಳಿಸಲಾಗಿದೆ.
ಕೇಂದ್ರ ಸರ್ಕಾರದ ಸೂಚನೆಯ ಆಧಾರದಲ್ಲಿ ರಾಜ್ಯದ ಪೊಲೀಸರಿಗೆ ಹೆಚ್ಚುವರಿ ರಜೆಯನ್ನು ರದ್ದುಗೊಳಿಸಲಾಗಿದೆ ಎಂದು ಗೃಹಸಚಿವ ಜಿ. ಪರಮೇಶ್ವರ್ ಅವರು ಹೇಳಿದರು.
ಈ ಬಗ್ಗೆ ಮಾಹಿತಿ ನೀಡಿದ ಅವರು ಈ ಯುದ್ಧದ ಸಂದರ್ಭದಲ್ಲಿ ಎಲ್ಲಿ ಯಾವಾಗ ಏನು ನಡೆಯುತ್ತದೋ ಗೊತ್ತಿಲ್ಲ. ಕೋಸ್ಟಲ್ ಗಾರ್ಡ್ ನಲ್ಲಿ ಕೂಡಾ ಭದ್ರತೆಯನ್ನು ಹೆಚ್ಚಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮಗಳನ್ನು ಕೂಡಾ ಅನುಸರಿಸಲಾಗುತ್ತಿದೆ ಎಂದು ಹೇಳಿದರು.


