ಉಡುಪಿ: ತುಳುನಾಡಿನ ಜನತೆಗೇ ಶಾಕ್ ಆಗುವಂತಹ ಘಟನೆಯೊಂದು ನಡೆದಿದ್ದು ಅದ್ಭುತ ಪ್ರತಿಭಾವಂತ ಕಲಾವಿದ, ಹಾಸ್ಯ ನಟ ಉಡುಪಿ ಮೂಲದ ರಾಕೇಶ್ ಪೂಜಾರಿ ಅವರು ಇತ್ತೀಚೆಗೆ ಹೃದಯಾಘಾತದಿಂದ ಸಾವನ್ನಪ್ಪಿದರು. ಇದೀಗ ಅವರ ಕುಟುಂಬಕ್ಕೆ ಚಿತ್ರತಂಡ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.
ರಿಷಬ್ ಶೆಟ್ಟಿ ನಿರ್ದೇಶನ ಮತ್ತು ನಟನೆಯ ಕಾಂತಾರ-೧ ಸಿನಿಮಾದಲ್ಲಿ ರಾಕೇಶ್ ಪೂಜಾರಿ ಅಭಿನಯಿಸಿದ್ದರು. ಇದೇ ಸಂದರ್ಭ ನಟ ಮೃತಪಟ್ಟಿದ್ದು ನಿಜಕ್ಕೂ ವಿಷಾದನೀಯ. ಆದರೆ ರಾಕೇಶ್ ಅಂತ್ಯಸಂಸ್ಕಾರಕ್ಕೂ ಕಾಂತಾರ ಚಿತ್ರತಂಡ ಆಗಮಿಸಿಲ್ಲ ಎಂದು ಆಪ್ತರು ಬೇಸರ ವ್ಯಕ್ತಪಡಿಸಿದ್ದಾರೆ.
ಕಾಂತಾರ ಸಿನಿಮಾ ತಂಡದಿಂದ ರಾಕೇಶ್ ಪೂಜಾರಿ ಕುಟುಂಬಕ್ಕೆ ಒಂದು ಕೋಟಿ ರೂ ಪರಿಹಾರ ನೀಡಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಒತ್ತಾಯಿಸಲಾಗುತ್ತಿದ್ದು ಚಿತ್ರ ತಂಡದಿಂದ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.

