ಮೇಷ: ಅನಿರೀಕ್ಷಿತ ಬಿಲ್ ಹಣಕಾಸಿನ ಹೊರೆ ಹೆಚ್ಚಿಸುತ್ತದೆ. ಸಂಗಾತಿ ಇಡೀ ದಿನ ನಿಮ್ಮ ಬಗ್ಗೆ ಯೋಚಿಸುತ್ತಾರೆ. ಟಿವಿ, ಮೊಬೈಲ್ ನೋಡುವುದರಿಂದ ಸಮಯ ವ್ಯರ್ಥವಾಗುತ್ತದೆ.
ವೃಷಭ: ವಿಶ್ವಾಸ, ಚೈತನ್ಯ ಇಂದು ಅಧಿಕವಾಗಿರುತ್ತದೆ. ಅನೇಕ ವಿಷಯಗಳಿಗೆ ಇಂದು ಹಣ ಖರ್ಚು ಮಾಡಬಹುದು. ಗೌಪ್ಯ ಮಾಹಿತಿ ಬಹಿರಂಗಗೊಳಿಸಬೇಡಿ.
ಮಿಥುನ: ಯಾರಾದರೂ ನಿಮ್ಮನ್ನು ದ್ವೇಷಿಸಿದರೂ ನೀವು ಪ್ರೀತಿಸಬೇಕು. ನಿಮ್ಮ ವೆಚ್ಚಗಳನ್ನು ಮುಂದೂಡಿ. ಜನರ ಹಸ್ತಕ್ಷೇಪ ಸಂಗಾತಿಯ ನಡುವಿನ ಸಂಬಂಧಕ್ಕೆ ಧಕ್ಕೆ ತರಬಹುದು.
ಕರ್ಕಾಟಕ: ಸುತ್ತಲಿನವರ ಬೆಂಬಲದಿಂದ ಖುಷಿಯಾಗಿರುತ್ತೀರಿ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಪ್ರೇಮ ಜೀವನ ರೋಮಾಂಚಕವಾಗಿರುತ್ತದೆ.
ಸಿಂಹ: ಮದ್ಯಪಾನ ಮಾಡಿದ್ರೆ ನಿದ್ರೆಗೆ ಭಂಗ ತರಬಹುದು. ಹಳೆಯ ಯಾವುದೇ ರೋಗ ಕಾಡಬಹುದು. ಪ್ರಿಯತಮೆ ಸಜೀವ ದೇವತೆಯಾಗಲಿದ್ದಾಳೆ.
ಕನ್ಯಾ: ಹೂಡಿಕೆ ಮಾಡುವುದನ್ನು ತಪ್ಪಿಸಿ. ಸಂಗಾತಿ ಆತಂಕ ಉಂಟು ಮಾಡುತ್ತಾರೆ. ವಿಶೇಷವಾದವರ ಗಮನ ಸೆಳೆಯುತ್ತೀರಿ.
ತುಲಾ: ದೀರ್ಘ ಕಾಲದ ಪ್ರಯಾಣ ತಪ್ಪಿಸಲು ಪ್ರಯತ್ನಿಸಿ. ಪ್ರೇಮ ಜೀವನ ಭರವಸೆ ತರುತ್ತದೆ. ಹಣಗಳಿಕೆಯ ಅವಕಾಶ ಲಾಭದಾಯಕವಾಗಿರುತ್ತದೆ.
ವೃಶ್ಚಿಕ: ಆರೋಗ್ಯಪೂರ್ಣವಾಗಿರುತ್ತದೆ. ಅನಿರೀಕ್ಷಿತ ಒಳ್ಳೆಯ ಸುದ್ದಿ ಕೇಳುತ್ತೀರಿ. ಪ್ರಣಯದ ಭಾವನೆಗಳಿಗೆ ಪ್ರತಿಕ್ರಿಯೆ ಸಿಗುತ್ತದೆ.
ಧನಸ್ಸು: ಕೆಲಸದಲ್ಲಿ ಹಿರಿಯರಿಂದ ಒತ್ತಡ. ಆರ್ಥಿಕ ಲಾಭ ಪಡೆಯುವ ಸಾಧ್ಯತೆ. ಬಿಡುವಿನ ಸಮಯ ನಿಸ್ವಾರ್ಥ ಸೇವೆಯಲ್ಲಿ ವಿನಿಯೋಗಿಸಿ.
ಮಕರ: ಕ್ರೀಡೆಯಲ್ಲಿ ಸಮಯ ಕಳೆಯುವ ಸಾಧ್ಯತೆ. ಸ್ನೇಹಿತರ ಜೊತೆ ಆಹ್ಲಾದಕರ ಕ್ಷಣ ಕಳೆಯಲು ಪ್ರಯತ್ನಿಸಿ. ಪ್ರೇಮ ನಿವೇದನೆ ಹೊರೆ ಇಳಿಸುತ್ತದೆ.
ಕುಂಭ: ಕೆಲಸದಲ್ಲಿ ಹಿರಿಯರಿಂದ ಒತ್ತಡ. ಮಕ್ಕಳ ಸಾಧನೆ ಹೆಮ್ಮೆ ತರುವಂತೆ ಮಾಡುತ್ತದೆ. ವೃತ್ತಿಯಲ್ಲಿ ಸ್ವಂತ ನಿರ್ಧಾರ ಮಾಡಿ.
ಮೀನ: ಯೋಗ ಧ್ಯಾನದೊಂದಿಗೆ ದಿನವನ್ನು ಪ್ರಾರಂಭಿಸಿ. ಉತ್ತಮ ಕೆಲಸದಿಂದ ಶತ್ರುಗಳು ಸ್ನೇಹಿತರಾಗಬಹುದು. ಆಸಕ್ತಿದಾಯಕ ವ್ಯಕ್ತಿಯನ್ನು ಭೇಟಿ ಮಾಡುತ್ತೀರಿ.


