ಭಾರತದ ಮಾಹಿತಿಯನ್ನು ವೈರಿ ರಾಷ್ಟ್ರವಾದ ಪಾಕಿಸ್ತಾನಕ್ಕೆ ಶೇರ್ ಮಾಡಿದ ಆರೋಪದಡಿ ಫೇಮಸ್ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಅವರನ್ನು ಅರೆಸ್ಟ್ ಮಾಡಲಾಗಿದೆ.
ಈಕೆ ಪಾಕ್ ಗುಪ್ತಚರ ಏಜೆಂಟ್ ಗಳೊಂದಿಗೆ ಸಂಪರ್ಕ ಹೊಂದಿದ್ದಳೆಂಬ ಗಂಭೀರ ಆರೋಪವೊಂದು ಕೇಳಿಬರುತ್ತಿದೆ. ಪಾಕಿಸ್ತಾನಕ್ಕೆ ಭೇಟಿ ನೀಡಿ ಬಂದಿದ್ದ ಇವಳ ಜೊತೆಗೆ ಇತರ ಆರು ಮಂದಿಯ ಮೇಲೆ ಬೇಹುಗಾರಿಕೆ ಆರೋಪವಿದೆ.
ಹರಿಯಾಣ ಮೂಲದ ಟ್ರಾವೆಲ್ ವ್ಲಾಗರ್ ಆಗಿರುವ ಈಕೆ ಪಾಕ್ ಮಾಹಿತಿದಾರೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಳಂತೆ. ಕಮಿಷನ್ ಏಜೆಂಟ್ ಗಳ ಮುಖೇನ ವೀಸಾ ಪಡೆದು ಪಾಕಿಸ್ತಾನಕ್ಕೆ ಪ್ರವೇಶ ಪಡೆದಿದ್ದಳು ಎಂಬ ಮಾಹಿತಿ ಕೂಡಾ ಲಭ್ಯವಾಗಿದೆ.



