ಮೈಸೂರು ಸ್ಯಾಂಡಲ್ ಸೋಪ್ ನ ರಾಯಭಾರಿಯಾಗಿ ಬಹುಭಾಷಾ ನಟಿ ತಮನ್ನಾ ಅವರನ್ನು ಆರು ಕೋಟಿ ನೀಡಿ ಆಯ್ಕೆ ಮಾಡಿರುವುದು ಕನ್ನಡಿಗರ, ಸ್ಯಾಂಡಲ್ ವುಡ್ ತಾರೆಯರ ಆಕ್ರೋಶಕ್ಕೆ ಕಾರಣವಾಗಿದೆ.
ನಟಿ ರಮ್ಯಾ, ಕಾರುಣ್ಯಾ ರಾಮ್, ರಾಗಿಣಿ ದ್ವಿವೇದಿ ಸೇರಿದಂತೆ ಅನೇಕ ನಟರು ಈ ಬಗ್ಗೆ ಕಿಡಿಕಾರಿದ್ದಾರೆ. ಕನ್ನಡದವರನ್ನು ಬಿಟ್ಟು ಮೈಸೂರು ಸ್ಯಾಂಡಲ್ ಸೋಪಿಗೆ ಪರಭಾಷೆಯ ನಟಿಯನ್ನು ಆಯ್ಕೆ ಮಾಡಿರುವುದು ಸರಿಯಲ್ಲ. ಅದ್ರಲ್ಲೂ ಎರಡು ವರ್ಷಗಳ ಅವಧಿಗೆ ಆರು ಕೋಟಿ ರೂ ನೀಡಿ ನಟಿ ತಮನ್ನಾ ಭಾಟಿಯಾ ಅವರನ್ನು ನೇಮಕ ಮಾಡಿರುವುದಕ್ಕೆ ಕನ್ನಡಿಗರು ರೊಚ್ಚಿಗೆದ್ದಿದ್ದಾರೆ.
ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ನಟಿಯರು ನಾವು ಇಂತಹ ಸ್ಥಳೀಯ ಬ್ರ್ಯಾಂಡ್ ಅಂದಾಗ ಫ್ರೀಯಾಗಿಯೇ ಮಾಡಿಕೊಡ್ತೇವೆ. ನಾವು ಕನ್ನಡ ನಟಿಯರನ್ನು ಬಿಟ್ಟು ಅವರನ್ನು ಆಯ್ಕೆ ಮಾಡುವುದು ಏನಿತ್ತು…ಎಂದು ಅಸಮಾಧಾನ ಹೊರ ಹಾಕಿದ್ದಾರೆ.

