ಮೇಷ: ಒತ್ತಡ ತೊಡೆದು ಹಾಕಲು ಸಂಗೀತ ಆಲಿಸಿ. ಧೃತಿಗೆಡಬೇಡಿ. ಸಂಗಾತಿಯ ಬೇಡಿಕೆಗಳು ಒತ್ತಡವನ್ನುಂಟು ಮಾಡಬಹುದು.
ವೃಷಭ: ವಿಶ್ರಾಂತಿ ಪಡೆಯಲು ಸಾಧ್ಯವಾಗುವ ಒಂದು ದಿನ. ತೈಲದಿಂದ ದೇಹಕ್ಕೆ ಮಸಾಜ್ ಮಾಡಿ. ಬಿಡುವಿನ ವೇಳೆಯಲ್ಲಿ ಚಲನಚಿತ್ರ ವೀಕ್ಷಿಸಬಹುದು.
ಮಿಥುನ: ಮಾನಸಿಕ ಒತ್ತಡಗಳ ಹೊರತಾಗಿಯೂ ಆರೋಗ್ಯ ಚೆನ್ನಾಗಿರುತ್ತದೆ. ಹಣ ಉಳಿಸುವ ಬಯಕೆ ಪೂರ್ಣಗೊಳ್ಳಬಹುದು. ಪ್ರೇಮ-ಪ್ರಕರಣದ ಬಗ್ಗೆ ಜೋರಾಗಿ ಹೇಳಬೇಡಿ.
ಕರ್ಕಾಟಕ: ಮನರಂಜನೆಗಾಗಿ ಕಚೇರಿಯಿಂದ ಬೇಗನೆ ಹೊರಡಿ. ಸಂಗಾತಿಯೊಂದಿಗೆ ಸಮಯ ಕಳೆಯಲು ಸಾಕಷ್ಟು ಹಣವಿರುತ್ತದೆ. ಒಬ್ಬ ಅಪರಿಚಿತ ವ್ಯಕ್ತಿ ಸಂಗಾತಿಯ ಮೇಲೆ ಸಿಟ್ಟಾಗಲು ಕಾರಣನಾಗುತ್ತಾನೆ.
ಸಿಂಹ: ಸಂಶಯಾಸ್ಪದ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಬೇಡಿ. ಕ್ರೀಡೆ ಜೀವನದ ಪ್ರಮುಖ ಭಾಗವಾಗಿದೆ. ನಾಳೆ ಹೆಚ್ಚು ನಿದ್ದೆ ಮಾಡುತ್ತೀರಿ.
ಕನ್ಯಾ: ಸಕಾರಾತ್ಮಕ ಚಿಂತನೆಯನ್ನು ಪ್ರಶಂಸಿಸಲಾಗುತ್ತದೆ. ಜೊತೆಗಿರುವವರ ಜೊತೆ ವಾದ ವಿವಾದಕ್ಕೆ ಇಳಿಯಬೇಡಿ. ನಿಮ್ಮ ಅಭಿಪ್ರಾಯ ಕೇಳಿದಾಗ ಅದನ್ನು ವ್ಯಕ್ತಪಡಿಸಲು ನಾಚಬೇಡಿ.
ತುಲಾ: ಹೆಚ್ಚಿನ ಕ್ಯಾಲೋರಿ ಆಹಾರ ತಪ್ಪಿಸಿ. ವ್ಯಾಯಾಮ ಕೈಬಿಡಬೇಡಿ. ಒಂಟಿಯಾಗಿ ಸಮಯ ಕಳೆಯುವುದು ಅಷ್ಟು ಸುಲಭವಲ್ಲ.
ವೃಶ್ಚಿಕ: ಆರೋಗ್ಯ ಚೆನ್ನಾಗಿರುತ್ತದೆ. ಕುಟುಂಬದ ವಯಸ್ಸಾದ ವ್ಯಕ್ತಿಯ ಆರೋಗ್ಯದಲ್ಲಿ ಏರುಪೇರಾಗಬಹುದು. ಮನೆಯ ವಿಷಯ ಕೇಳಿ ಭಾವನಾತ್ಮಕವಾಗುತ್ತೀರಿ.
ಧನಸ್ಸು: ನಿಮ್ಮ ಶಕ್ತಿಯ ಮಟ್ಟ ಹೆಚ್ಚಿರುತ್ತದೆ. ಪ್ರೀತಿಪಾತ್ರರು ನಿಮ್ಮಿಂದ ಏನು ಬೇಕಾದರೂ ಬೇಡಿಕೊಳ್ಳಬಹುದು. ಆರೋಗ್ಯ ಪರಿಪೂರ್ಣವಾಗಿರುತ್ತದೆ. ಭಯ ಹೋಗಲಾಡಿಸಲು ಉತ್ತಮ ದಿನ. ಪ್ರೀತಿಪಾತ್ರರು ನಿಮ್ಮಿಂದ ಏನು ಬೇಕಾದರೂ ನಿರೀಕ್ಷಿಸಬಹುದು. ನಿಮ್ಮ ಬಾಸ್ ಕೆಲಸವನ್ನು ಪ್ರಶಂಸಿಸಬಹುದು.
ಮಕರ: ವ್ಯಕ್ತಿತ್ವ ಸುಧಾರಿಸಲು ಗಂಭೀರ ಪ್ರಯತ್ನ ಮಾಡಿ. ಪೋಷಕರ ಸಲಹೆಯನ್ನು ಆಲಿಸಿ. ಪ್ರಿಯತಮೆಯ ಜೊತೆಗಿನ ಸಂಬಂಧ ಬೇರೊಬ್ಬರ ಹಸ್ತಕ್ಷೇಪದಿಂದ ಹಾಳಾಗಬಹುದು.
ಕುಂಭ: ಸಂತೋಷದ ಸುದ್ದಿ ಪಡೆಯುವ ಸಾಧ್ಯತೆ. ಭೂಮಿ ಮಾರುವ ಮುಖೇನ ಉತ್ತಮ ಹಣ ಪಡೆಯಬಹುದು. ರಹಸ್ಯ ಪ್ರಣಯಗಳು ನಿಮ್ಮ ಖ್ಯಾತಿಯನ್ನು ನಾಶಪಡಿಸಬಹುದು.
ಮೀನ: ಸಣ್ಣ ವಿಷಯಗಳು ಮನಸ್ಸು ಕೆಡಿಸಲು ಬಿಡಬೇಡಿ. ಹೂಡಿಕೆ ಲಾಭ ಮತ್ತು ಸಮೃದ್ಧಿ ತರುತ್ತದೆ. ಸಂಗಾತಿಯ ಜೊತೆ ರಾಜಿ ಮಾಡಿಕೊಳ್ಳುವುದು ತುಂಬಾ ಕಷ್ಟ.


