ಉಡುಪಿ: ಚರ್ಚ್ ನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾಗಲೇ ಕುಸಿದು ಬಿದ್ದು ಮಹಿಳೆಯೋರ್ವಳು ಸಾವನ್ನಪ್ಪಿರುವ ಘಟನೆ ಉಡುಪಿಯ ಅಜ್ಜರಕಾಡಿನಲ್ಲಿ ನಡೆದಿದೆ.
ಕುಂದಾಪುರದ ಖಾರ್ವಿ ಕೆಳಕೆರೆಯ ನಿವಾಸಿ, ಐವತ್ತೆರಡು ವರ್ಷದ ಶಾಂತಿ ಮೃತಪಟ್ಟ ದುರ್ದೈವಿ. ನಿನ್ನೆ ಇವರು ಅಜ್ಜರಕಾಡಿನಲ್ಲಿನ ಚರ್ಚ್ ನಲ್ಲಿ ಪ್ರಾರ್ಥನೆ ಮಾಡುತ್ತಿದ್ದರು. ಇದ್ದಕಿದ್ದಂತೆ ಕುಸಿದು ಬಿದ್ದಿದ್ದಾರೆ.
ಮೃತರು ಕಳೆದ ಐದು ವರ್ಷಗಳಿಂದ ಥೈರಾಯ್ಡ್ ಮತ್ತು ಗರ್ಭಾಶಯ ಸಂಬಂಧಿತ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಅನಾರೋಗ್ಯದ ಕಾರಣದಿಂದ ಹಠಾತ್ ಸಾವಿಗೀಡಾಗಿರಬಹುದು ಎಂದು ಉಡುಪಿ ಪೊಲೀಸರು ತಿಳಿಸಿದ್ದಾರೆ.

