ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಹೆಸರುವಾಸಿಯಾಗಿರುವ ಕರಾವಳಿಯ ಹೆಮ್ಮೆಯ ವಿದ್ಯಾಸಂಸ್ಥೆ ತ್ರಿಷಾ ಇನ್ಸ್ಟಿಟ್ಯೂಟ್ ನಲ್ಲಿ ಉದ್ಯೋಗವಕಾಶವಿದ್ದು ವಿವಿಧ ಹುದ್ದೆಗಳಿಗೆ ಅನುಗುಣವಾಗಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗುತ್ತಿದೆ.
ಉಡುಪಿಯಲ್ಲಿರುವ ಸಂಸ್ಥೆಗೆ ಕಾಮರ್ಸ್ ಉಪನ್ಯಾಸಕರು ಬೇಕಾಗಿದ್ದು ಅಭ್ಯರ್ಥಿಗಳು ಎಂಕಾಂ ಪದವಿ ಪಡೆದಿರಬೇಕು. ಮತ್ತು ಹಿಂದಿ ಉಪನ್ಯಾಸಕ್ಕೆ ಅಭ್ಯರ್ಥಿಗಳು ಹಿಂದಿ ಭಾಷೆಯಲ್ಲಿ ಎಂಎ ಪದವಿ ಪಡೆದಿರಬೇಕು. ಉಡುಪಿ ಮತ್ತು ಮಂಗಳೂರಿನ ವಿದ್ಯಾಸಂಸ್ಥೆಯಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗಕ್ಕೆ ಉಪನ್ಯಾಸಕರು ಬೇಕಾಗಿದ್ದು ಅಭ್ಯರ್ಥಿಗಳು ಎಂಸಿಎ ಪದವಿ ಪಡೆದಿರಬೇಕು.
ಉಡುಪಿ ಮತ್ತು ಮಂಗಳೂರಿನ ವಿದ್ಯಾಸಂಸ್ಥೆಯಲ್ಲಿ ಗಣಿತ ವಿಭಾಗಕ್ಕೆ ಉಪನ್ಯಾಸಕರು ಬೇಕಾಗಿದ್ದು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗಣಿತ ವಿಷಯದಲ್ಲಿ ಎಂಎಸ್ಸಿ ಪದವಿ ಪೂರ್ಣಗೊಳಿಸಿರಬೇಕು. ಉಡುಪಿಯ ಸಂಸ್ಥೆಗೆ ಫೈನಾನ್ಸ್ ಮತ್ತು ಎಂಐಎಸ್ ಎಕ್ಸಿಕ್ಯುಟಿವ್ ಕಲಿಸುವ ಉಪನ್ಯಾಸಕರ ಅಗತ್ಯವಿದ್ದು ಅಭ್ಯರ್ಥಿಗಳು ಬಿಕಾಂ ಪದವಿಯ ಜೊತೆಗೆ ಎರಡು ವರ್ಷದ ಅನುಭವ ಹೊಂದಿರಬೇಕು.
ಮಂಗಳೂರಿನ ಸಂಸ್ಥೆಗೆ ಕಚೇರಿ ಕೆಲಸಕ್ಕೆ ಸಿಬ್ಬಂದಿ ಬೇಕಾಗಿದ್ದು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಪದವಿ ಪಡೆದಿರುವುದರ ಜೊತೆಗೆ ಕಚೇರಿ ನಿರ್ವಹಣೆಯಲ್ಲಿ ಕನಿಷ್ಠ ಒಂದು ವರ್ಷ ವೃತ್ತಿ ಅನುಭವ ಹೊಂದಿರಬೇಕು. ಅಲ್ಲದೆ ಉಡುಪಿ ಮತ್ತು ಮಂಗಳೂರಿನ ತ್ರಿಷಾ ವಿದ್ಯಾಸಂಸ್ಥೆಯ ಹಾಸ್ಟೆಲ್ ಗೆ ವಾರ್ಡನ್ ಹುದ್ದೆ ಭರ್ತಿ ಮಾಡಲು ಅಭ್ಯರ್ಥಿಗಳು ಬೇಕಾಗಿದ್ದು ಅರ್ಜಿ ಸಲ್ಲಿಸುವ ಮಹಿಳಾ ಅಥವಾ ಪುರುಷ ಅಭ್ಯರ್ಥಿಗಳು ಯಾವುದೇ ಪದವಿಯನ್ನು ಪಡೆದಿರಬೇಕು.
ಈ ಮೇಲಿನ ಎಲ್ಲಾ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ತಮ್ಮ ರೆಸ್ಯೂಮ್ ಮತ್ತು ಇತ್ತೀಚಿನ ಭಾವಚಿತ್ರವನ್ನು hr@siddhanthfoundation.com ಈ ಇಮೇಲ್ ಗೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ 9606454853 ಈ ನಂಬರನ್ನು ಸಂಪರ್ಕಿಸಿ.


