ಉಡುಪಿ: ಅಸ್ತಿತ್ವಕ್ಕೆ ಬಂದ ಮಿದಲ ಶೈಕ್ಷಣಿಕ ವರ್ಷದಲ್ಲೇ ಉಡುಪಿಯ ಪ್ರಖ್ಯಾತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ಸೈಲಸ್ ಪಿಯು ಕಾಲೇಜು ಮತ್ತೊಂದು ಸಾಧನೆಗೈಯ್ಯುವುದರ ಮುಖೇನ ಹೊಸ ಮೈಲಿಗಲ್ಲನ್ನು ಸೃಷ್ಟಿಸಿದೆ.
ಹೌದು. ಪ್ರಸಕ್ತ ಸಾಲಿನ ಕೆಸಿಇಟಿ ಫಲಿತಾಂಶದಲ್ಲಿ ಸೈಲಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸುವುದರ ಜೊತೆಗೆ ಸಾಧನೆಗೈದಿದ್ದಾರೆ. ಇಲ್ಲಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಕೆಸಿಇಟಿ ಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದ್ದಾರೆ.

ಈತನ್ ಮಾರ್ವಿನ್ ಡಿಸೋಜ ಇಂಜಿನಿಯರಿಂಗ್ ವಿಭಾಗದಲ್ಲಿ 4954 ರ್ಯಾಂಕ್ ಹಾಗೂ ಅಗ್ರಿಕಲ್ಚರ್ ಬಿಎಸ್ಸಿಯಲ್ಲಿ 2948ನೇ ರ್ಯಾಂಕ್ ಪಡೆದಿದ್ದಾರೆ.
ನಜ್ವ ಸನ ಇಂಜಿನಿಯರಿಂಗ್ ವಿಭಾಗದಲ್ಲಿ 11860ನೇ ರ್ಯಾಂಕ್ ಹಾಗು ಅಗ್ರಿಕಲ್ಚರ್ ಬಿ.ಎಸ್ಸಿ 6699ನೇ ರ್ಯಾಂಕ್ ಮತ್ತು ಪ್ರಿಯಾ ಅಗ್ರಿಕಲ್ಚರ್ ಬಿಎಸ್ಸಿ 7196 ನೇ ರ್ಯಾಂಕ್ ಪಡೆದಿದ್ದಾರೆ.

ರಾಜ್ಯದಲ್ಲಿ 3.11 ಲಕ್ಷ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆದಿದ್ದರು. ಅದರಲ್ಲಿ ಸೈಲಾಸ್ ಕಾಲೇಜಿನ ವಿದ್ಯಾರ್ಥಿಗಳು ಈ ಸಾಧನೆ ಮಾಡಿರುವುದು ಉಡುಪಿ ಜಿಲ್ಲೆಗೆ ಹೆಮ್ಮೆಯ ವಿಷಯವೇ ಸರಿ. ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗು ಉಪನ್ಯಾಸಕ ವರ್ಗ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.


