ಬ್ರಹ್ಮಾವರ: ರೋಟರಿ ಕ್ಲಬ್ ಬ್ರಹ್ಮಾವರ ಮತ್ತು ರೋಟರಿ ಕ್ಲಬ್ ಬಾರ್ಕೂರು ಮತ್ತು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ ಹಾಗೂ ಕೃಷಿ ಮತ್ತು ವಿಜ್ಞಾನ ಕೇಂದ್ರ ಮತ್ತು ವಲಯ ಕೃಷಿ ಮತ್ತು ತೋಟಗಾರಿಕೆ, ಸಂಶೋಧನಾ ಕೇಂದ್ರ ಹಾಗೂ ಡಿಪ್ಲೋಮಾ ಕೃಷಿ ಮಹಾವಿದ್ಯಾಲಯ ಬ್ರಹ್ಮಾವರ ಇದರ ಜಂಟಿ ಆಶ್ರಯದಲ್ಲಿ ಬ್ರಹ್ಮಾವರದ ಎಸ್ ಎಂಎಸ್ ಸಭಾಭವನದಲ್ಲಿ ಹಲಸು ಮತ್ತು ಹಣ್ಣು ಮೇಳ ನಡೆಯುತ್ತಿದೆ.
ನಿನ್ನೆ ಆರಂಭಗೊಂಡ ಈ ಮೇಳಕ್ಕೆ ಗ್ರಾಹಕರಿಂದ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದ್ದು ಇಂದು ಮತ್ತು ನಾಳೆ ಹಣ್ಣುಗಳ ಮೇಳ ನಡೆಯಲಿದೆ.
ಹಲವಾರು ತಿನಿಸುಗಳು, ಹಣ್ಣಿನ ವಿವಿಧ ಬಗೆಗಳು, ಐಸ್ ಕ್ರೀಂಗಳು, ಹಲಸಿನ ಹೋಳಿಗೆ, ತರಕಾರಿ ಬೀಜಗಳು, ಹಣ್ಣಿನ ಉತ್ಪನ್ನಗಳು, ಗೃಹ ತಯಾರಿಕೆಯ ಉತ್ಪನ್ನಗಳು, ಹೂವಿನ ಕಸಿ ಗಿಡಗಳು ಮೇಳದಲ್ಲಿ ಇರಲಿದೆ. ಆಸಕ್ತ ಗ್ರಾಹಕರು ಈ ಮೇಳದಲ್ಲಿ ಪಾಲ್ಗೊಳ್ಳಬಹುದು.


