ಕಾರ್ಕಳ: ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಖ್ಯಾತ ಎರಡು ಕಂಬಳದ ಕೋಣಗಳು ಬೆಂಕಿಯಲ್ಲಿ ಸುಟ್ಟು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕಾಂತಾವರ ಗ್ರಾಮದ ಬೇಲಾಡಿಯಲ್ಲಿ ನಡೆದಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಅವಘಡ ನಡೆದಿರಬಹುದು ಎಂಬುವುದರ ಬಗ್ಗೆ ಶಂಕೆ ವ್ಯಕ್ತವಾಗಿದೆ. ೨೦೨೨-೨೩ನೇ ಸಾಲಿನ ಕಂಬಳ ಸಾಲಿನಲ್ಲಿ ಕನಹಲಗೆ ಚಾಂಪಿಯನ್ ಆಗಿದ್ದ ಬೇಲಾಡಿ ಬಾವ ಅಶೋಕ್ ಶೆಟ್ಟಿ ಅವರ ಅಪ್ಪು ಮತ್ತು ತೋನ್ಸೆ ಕೋಣಗಳು ಮೃತಪಟ್ಟಿದೆ.

ಜಿಲ್ಲಾಮಟ್ಟದ ಕಂಬಳಗಳಲ್ಲಿ ಪ್ರಶಸ್ತಿ ಗೆದ್ದಿದ್ದ ಅಪ್ಪು ಮತ್ತು ತೋನ್ಸೆ ಕೋಣಗಳ ಅಗಲುವಿಕೆಗೆ ಕಂಬಳ ಪ್ರಿಯರು, ಊರಿನ ಜನರು ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. ಬೆಂಕಿಯ ತೀವ್ರತೆಗೆ ಕೋಣಗಳ ದೇಹ ಸುಟ್ಟು ಕರಕಲಾಗಿದೆ.


