ಉತ್ತಮ ಫಲಿತಾಂಶಭರಿತ ಬೋಧನೆಯೇ ನಮ್ಮ ಗುರಿ ಎಂಬ ಧ್ಯೇಯವನ್ನಿಟ್ಟುಕೊಂಡು ಹಲವಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಹೊಂಗಿರಣವಾದ ಕೃಷ್ಣನಗರಿ ಉಡುಪಿಯಲ್ಲಿ ಕಾರ್ಯಾಚರಿಸುತ್ತಿರುವ ಹೆಮ್ಮೆಯ ಸಂಸ್ಥೆ ಸ್ನೇಹ ಟ್ಯುಟೋರಿಯಲ್ ಕಾಲೇಜು. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಲ್ಲಿ ನೋಂದಣಿಯಾಗಿರುವ ಸಂಸ್ಥೆ ಇದಾಗಿದ್ದು ನೇರವಾಗಿ ಎಸ್ಎಸ್ಎಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವವರು ಇಲ್ಲಿ ಸೂಕ್ತ ತರಬೇತಿ ಪಡೆದುಕೊಳ್ಳಬಹುದು.
7,8,9ನೇ ತರಗತಿಯಲ್ಲಿ ಅನುತ್ತೀರ್ಣಗೊಂಡವರಿಗೆ ನೇರವಾಗಿ ಕನ್ನಡ ಅಥವಾ ಆಂಗ್ಲ ಭಾಷೆಯಲ್ಲೂ ಪರೀಕ್ಷೆ ಬರೆಯಲು ಅವಕಾಶಗಳಿವೆ. ಪ್ರಥಮ ಪಿಯುಸಿ ಅನುತ್ತೀರ್ಣಗೊಂಡವರಿಗೆ ನೇರವಾಗಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಬಹುದು. ಇದನ್ನು ಸೆಕೆಂಡ್ ಪಿಯು ಫೇಲ್ ಆಗಿದ್ರೂ ಕೂಡಾ ಡಿಗ್ರಿಯಲ್ಲಿ ವಿಜ್ಞಾನ, ವಾಣಿಜ್ಯ, ಕಲಾ ವಿಭಾಗಕ್ಕೆ ಪ್ರವೇಶ ನೀಡಲಾಗುತ್ತದೆ.
ಈ ಸಂಸ್ಥೆಯಲ್ಲಿ ದ್ವಿತೀಯ ಪಿಯುಸಿ ಮತ್ತು ಹತ್ತನೇ ತರಗತಿಯ ಪೂರಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತದೆ. ಒಂದರಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಅವರ ಭಾಷಾ ಮಾಧ್ಯಮಕ್ಕೆ ಅನುಗುಣವಾಗಿ ಸಂಜೆ ಟ್ಯೂಷನ್ ಕ್ಲಾಸ್ ಗಳು ಕೂಡಾ ನಡೆಯುತ್ತದೆ. ಪ್ರಥಮ ಹಾಗೂ ದ್ವಿತೀಯ ಪಿಯು ಎಲ್ಲಾ ವಿಷಯಗಳಿಗೆ ನುರಿತ ಅನುಭವಿ ಉಪನ್ಯಾಸಕರಿಂದ ತರಬೇತಿ ನೀಡಲಾಗುತ್ತದೆ.
ಸಂಸ್ಥೆಯಲ್ಲಿ ವಿದ್ಯಾರ್ಜನೆಗೈದ ಮಹೇಶ್ ಎಂಬ ವಿದ್ಯಾರ್ಥಿ ಕಳೆದ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 550 ಅಂಕ ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಉತ್ತಮ ಫಲಿತಾಂಶವೇ ಇವರ ಶಿಸ್ತುಬದ್ಧ ಶಿಕ್ಷಣಕ್ಕೆ ನೈಜ ನಿದರ್ಶನ.
ಈಗಾಗಲೇ ರೆಗ್ಯುಲರ್ ಬ್ಯಾಚುಗಳು ಆರಂಭವಾಗಿದ್ದು ಸೋಮವಾರದಿಂದ ಶನಿವಾರದವರೆಗೆ ನಡೆಯುತ್ತದೆ. ಹೆಚ್ಚಿನ ಮಾಹಿತಿಗೆ ಭೇಟಿ ನೀಡಿ ಸ್ನೇಹ ಟ್ಯುಟೋರಿಯಲ್ ಕಾಲೇಜು, ಶ್ರೀರಾಮ್ ಬಿಲ್ಡಿಂಗ್ ಕಲ್ಸಂಕ ರಸ್ತೆ ಉಡುಪಿ.
ದೂರವಾಣಿ: 2530314 ಅಥವಾ 9448376314


