ಉಡುಪಿ: ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಪುತ್ತಿಗೆ ಮಠದ ಶ್ರೀಗಳ ಆಶೀರ್ವಾದದೊಂದಿಗೆ ಮಠದ ಆಶ್ರಯದಲ್ಲಿ ಇದೇ ಬರುವ ಜೂನ್ 13ರಿಂದ 15ರವರೆಗೆ 3ದಿನಗಳ ಕಾಲ ಹಣ್ಣುಗಳ ಹಬ್ಬ ನಡೆಯಲಿದೆ.
ಗೀತಾ ಮಂದಿರದಲ್ಲಿ ಜರಗಲಿರುವ ಈ ಹಣ್ಣುಗಳ ಮೇಳವು ಬೆಳಿಗ್ಗೆ 8ಕ್ಕೆ ಪ್ರಾರಂಭಗೊಂಡು ರಾತ್ರಿ 8ರವರೆಗೆ ನಡೆಯಲಿದೆ. ವಿವಿಧ ರೀತಿಯ ಮಾವಿನ ಹಣ್ಣುಗಳು ವಿಶೇಷ ಆಕರ್ಷಣೆಯಾಗಲಿದೆ.
ಮಾವಿನ ಹಣ್ಣು, ಕೆಂಪು ಹಲಸು, ಕಲ್ಲಂಗಡಿ, ಸೇಬು ಹಣ್ಣಿನ ಐಸ್ ಕ್ರೀಂ, ಹಲಸಿನ ಹೋಳಿಗೆ, ಮುಳ್ಕ, ಹೂವಿನ ಗಿಡಗಳ ಪ್ರದರ್ಶನ ಮತ್ತು ಮಾರಾಟ ಮೇಳ ಕೂಡಾ ಇರಲಿದೆ.

