ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯೂ ಇಷ್ಟು ದಿನ ಆಸಕ್ತಿಯಿಂದ ವೀಕ್ಷಿಸುತ್ತಿದ್ದ ಐಪಿಎಲ್ ಪಂದ್ಯ ನಾಳೆ ಮುಕ್ತಾಯಗೊಳ್ಳುತ್ತದೆ. ಹದಿನೆಂಟು ವರ್ಷಗಳ ಬಳಿಕ ಫೈನಲ್ ಗೆ ಬಂದ ರಾಯಲ್ ಚಾಲೆಂಜರ್ಸ್ ತಂಡ ನಾಳೆ ಕಪ್ ಗೆಲ್ಲುತ್ತಾ ಅನ್ನೋದೆ ಯಕ್ಷಪ್ರಶ್ನೆಯಾಗಿದೆ.
ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.
ಕ್ರಿಕೆಟ್ ಕಿಂಗ್ ಕೊಹ್ಲಿಯ ಜೆರ್ಸಿ ಸಂಖ್ಯೆ ಹದಿನೆಂಟಾಗಿದ್ದು ಈ ಬಾರಿ ಹದಿನೆಂಟು ವರ್ಷದ ನಂತರವೇ ಆರ್ ಸಿಬಿ ಫೈನಲ್ಸ್ ನಲ್ಲಿ ಅಬ್ಬರಿಸುತ್ತಿದೆ. ನಾಳೆಯ ದಿನಾಂಕವೂ ಕೂಡಾ ವಿಶೇಷತೆಯನ್ನು ಹೊಂದಿದ್ದು ಈ ಎಲ್ಲಾ ಲಕ್ಷಣಗಳು ನಾಳೆ ಆರ್ ಸಿಬಿ ಕಪ್ ಗೆಲ್ಲೋದನ್ನು ಸೂಚಿಸುತ್ತಿದೆ ಎಂದು ಹೇಳಲಾಗುತ್ತಿದೆ.
ಈ ಬಾರಿಯ ಐಪಿಎಲ್ ನಲ್ಲಿ ಗೆದ್ದ ತಂಡಕ್ಕೆ ಬಹುಮಾನವಾಗಿ ಬರೋಬ್ಬರಿ ಇಪ್ಪತ್ತು ಲಕ್ಷ ರೂ. ಸಿಗುತ್ತದೆ. ಅಂದರೆ ನಾಳೆ ಆರ್ ಸಿಬಿ ಗೆದ್ದರೆ ಇಪ್ಪತ್ತು ಕೋಟಿ ರೂ. ತನ್ನದಾಗಲಿದೆ. ಯಾವುದಕ್ಕೂ ನಾಳೆ ಕುತೂಹಲಕ್ಕೆ ತೆರೆ ಬೀಳಲಿದೆ.

