ಉಡುಪಿ: ಆನ್ಲೈನ್ ನಲ್ಲಿ ಟ್ರೇಡಿಂಗ್ ವಿಚಾರಕ್ಕೆ ಸಂಬಂಧಿಸಿ ಹಣ ಹೂಡಿಕೆ ಮಾಡುವಂತೆ ತಿಳಿಸಿ ಲಕ್ಷಾಂತರ ರೂ. ವಂಚಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿಯ ದೀಪ್ತಿ ಎಂಬವರು ವಂಚನೆಗೊಳಗಾದವರು.
ಇವರನ್ನು ಟೆಲಿಗ್ರಾಂ ಆ್ಯಪ್ ನಲ್ಲಿ ಯಾರೋ ಅಪರಿಚಿತರು ಕೆ ಆ್ಯಂಡ್ ಕೆ ಗ್ರೂಪ್ ಗೆ ಸೇರಿಸಿ ಕೆಲವು ಟಾಸ್ಕ್ ನೀಡಿ ಟ್ರೇಡಿಂಗ್ ನಲ್ಲಿ ಹಣ ಹೂಡಿಕೆ ಮಾಡಿದರೆ ಅಧಿಕ ಲಾಭ ಗಳಿಸಬಹುದು ಎಂದು ನಂಬಿಸಿದ್ದಾರೆ.
ಅದರಂತೆ ಮೋಸ ಹೋದ ಈಕೆ ಹಂತಹಂತವಾಗಿ ನಾಲ್ಕು ಲಕ್ಷಕ್ಕೂ ಅಧಿಕ ಹಣ ವರ್ಗಾಯಿಸಿದ್ದಾರೆ. ಅಪರಿಚಿತ ವ್ಯಕ್ತಿಗಳು ಯಾವುದೇ ಲಾಭಾಂಶದ ಹಣ ನೀಡದೆ ಯಾಮಾರಿಸಿದ್ದಾರೆ. ಈ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


