ಕನ್ನಡದ ನಂಬರ್ ಒನ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 12 ಕ್ಕೆ ಕೌಂಟ್ ಡೌನ್ ಶುರುವಾಗಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಈ ಶೋ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಗಳಲ್ಲಿ ಒಂದು.
ಕಳೆದ ವರ್ಷ ನಡೆದ ಸೀಸನ್ 12 ನ್ನು ಹಳ್ಳಿ ಹೈದ ಸರಿಗಮಪ ಖ್ಯಾತಿಯ ಹನುಮಂತ ಗೆದ್ದುಕೊಂಡಿದ್ದ. ಹಾಗೆಯೇ ಸೀಸನ್ 11 ರ ಶೋ ಮುಗಿಯುವ ಮೊದಲೇ ನಿರೂಪಕನಾಗಿ ಇದು ನನ್ನ ಕೊನೆಯ ಸೀಸನ್ ಎಂದು ನಿರೂಪಕ ಕಿಚ್ಚ ಸುದೀಪ್ ಘೋಷಣೆ ಮಾಡಿದ್ದರು.
ಇದೀಗ ಸೀಸನ್ 12 ಕ್ಕೆ ಕೌಂಟ್ ಡೌನ್ ಶುರುವಾಗಿದ್ದು, ನಿರೂಪಕ ಯಾರಾಗ್ತಾರೆ ಎಂಬ ಕುತೂಹಲ ಎಲ್ಲರಲ್ಲಿ ಮನೆಮಾಡಿದೆ. ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ….
ಹೌದು . ಬಿಗ್ ಬಾಸ್ ಸೀಸನ್ 12 ರ ನಿರೂಪಕರಾಗಿ ಕಾರ್ಯಕ್ರಮ ಮುನ್ನಡೆಸಲು ಕಿಚ್ಚ ಸುದೀಪ್ ಒಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ತಾನು ನಿರೂಪಕನಾಗಿ ಮುಂದುವರಿಯಲು ಕಲರ್ಸ್ ಕನ್ನಡ ವಾಹಿನಿಗೆ ಸುದೀಪ್ ಕೆಲವೊಂದು ಷರತ್ತುಗಳನ್ನು ವಿಧಿಸಿದ್ದು, ವಾಹಿನಿ ಷರತ್ತುಗಳಿಗೆ ಓಕೆ ಎಂದಿದೆ ಎನ್ನಲಾಗಿದೆ.
ಎಲ್ಲವೂ ಅಂದು ಕೊಂಡಂತೆ ನಡೆದರೆ ಬಿಗ್ ಬಾಸ್ ಸೀಸನ್ 12 ರ ಬಾಸ್ ಅಂದರೆ ನಿರೂಪಕರಾಗಿ ಕಿಚ್ಚ ಸುದೀಪ್ ನಡೆಸಿಕೊಡಲಿದ್ದಾರೆ.

