ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಅನ್ನುವಂತದ್ದು ಯುವಜನತೆಯಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಅದೆಷ್ಟೋ ಯುವ ತರುಣರು ಹಾರ್ಟ್ ಅಟ್ಯಾಕ್ ಆಗಿ ಸಾವಿಗೀಡಾಗುತ್ತಿದ್ದಾರೆ. ಡ್ಯಾನ್ಸ್ ಮಾಡುತ್ತಿರುವಾಗಲೇ, ವಾಹನ ಚಲಾಯಿಸುವಾಗ, ಕುಳಿತಲ್ಲೇ ಹೃದಯಾಘಾತವಾಗುವ ಸಂಭವಗಳು ನಿಜಕ್ಕೂ ಅಚ್ಚರಿಯ ಜೊತೆಗೆ ಆತಂಕವನ್ನು ತಂದೊಡ್ಡುತ್ತದೆ. ಹಾಗಾದ್ರೆ ಇದರ ಲಕ್ಷಣಗಳೇನು ಎಂಬುದರ ಬಗ್ಗೆ ನೋಡೋಣ.
ಸಾಮಾನ್ಯವಾಗಿ ಈಗಿನ ಕಾಲಘಟ್ಟದಲ್ಲಿ ಅನಾರೋಗ್ಯಕರ ಆಹಾರ, ಅವ್ಯವಸ್ಥಿತ ಜೀವನ ಶೈಲಿ, ಅಧಿಕ ಒತ್ತಡ, ರಕ್ತದೊತ್ತಡ ಇತ್ಯಾದಿ ಕಾರಣಗಳಿಂದ ಮನುಷ್ಯ ಹೃದಯಾಘಾತಕ್ಕೆ ಒಳಗಾಗುತ್ತಾನೆ.
ಅಧಿಕ ಪ್ರಮಾಣದಲ್ಲಿ ಬೆವರುವುದು, ಉಸಿರಾಟದಲ್ಲಿ ತೊಂದರೆ, ತಲೆತಿರುಗುವಿಕೆ, ಎದೆಯಲ್ಲಿ ತೀವ್ರ ನೋವು ಅಥವಾ ಎಡಗೈ, ಕುತ್ತಿಗೆ ಅಥವಾ ದವಡೆಯಲ್ಲಿ ನೋವು ಕಾಣಿಸಿಕೊಂಡರೆ ಇದು ಹೃದಯಾಘಾತದ ಲಕ್ಷಣವಾಗಿರುತ್ತದೆ. ಈ ರೀತಿಯ ಅನುಭವ ಆದ್ರೆ ನಿರ್ಲಕ್ಷಿಸದೆ ಸೂಕ್ತ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.
ಇದಕ್ಕೆ ಮುಂಜಾಗ್ರತಾ ಕ್ರಮವಾಗಿ ಜೀವನಶೈಲಿಯನ್ನು ಆರೋಗ್ಯಕರವಾಗಿ ಇಡುವುದು ಒಳ್ಳೆಯದು. ತೂಕ, ಮಧುಮೇಹ, ರಕ್ತದೊತ್ತಡ ನಿಯಂತ್ರಣದಲ್ಲಿಟ್ಟುಕೊಂಡು ಆರೋಗ್ಯಕರ ಆಹಾರ ಸೇವಿಸಬೇಕು. ದಿನನಿತ್ಯ ವ್ಯಾಯಾಮ ಮಾಡಿ. ಧೂಮಪಾನ, ಮದ್ಯಪಾನದಂತಹ ಚಟ ಇದ್ದರೆ ಅದರಿಂದ ದೂರವಿರುವುದೇ ಒಳಿತು.

