ಕಾರ್ಕಳ: ಶೋರೂಂನಲ್ಲಿ ಸರ್ವೀಸ್ ಗೆ ಇಟ್ಟಿದ್ದ ಕಾರಿನ ಇಂಜಿನ್ ಪಾರ್ಟ್ಸ್ ಗಳನ್ನು ಕದ್ದು ಮತ್ತೊಂದು ಕಾರಿಗೆ ಅಳವಡಿಸಿದ ಘಟನೆ ಕಾರ್ಕಳದ ಶೋರೂಂನಲ್ಲಿ ನಡೆದಿದ್ದು ವಂಚನೆಗೊಳಗಾದ ಗ್ರಾಹಕ ಈ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.
ಕಾರ್ಕಳದ ಮಾರುತಿ ಜುಜುಕಿ ಆಥರೈಸ್ಡ್ ಸರ್ವೀಸ್ ಶೋರೂಂನಲ್ಲಿ ಈ ಘಟನೆ ನಡೆದಿದೆ. ಎರಡು ದಿನಗಳ ಹಿಂದೆ ಕಾರಿನ ಮಾಲಕನಿಗೆ ಸರ್ವೀಸ್ ಆಗಿದೆ ಎಂದು ಕರೆ ಬಂದಿದ್ದು ಅವರು ಶೋರೂಂಗೆ ಬಂದು ಕಾರನ್ನು ಚೆಕ್ ಮಾಡಿದ್ದಾರೆ. ಆಗ ಅವರ ಕಾರಿನ ಇಂಜಿನ್ ಪಾರ್ಟ್ಸ್ ಗಳು ಕಾಣೆಯಾಗಿದ್ದವು. ಸಿಬ್ಬಂದಿಯ ಬಳಿ ಕೇಳಿದಾಗ ಹಾರಿಕೆಯ ಉತ್ತರ ನೀಡಿದ್ದಾರೆ.
ಅನುಮಾನಗೊಂಡು ಕಾರು ಮಾಲೀಕ ಶೋರೂಂನಲ್ಲಿದ್ದ ಇತರ ಕಾರನ್ನು ಪರಿಶೀಲಿಸಿದಾಗ ತನ್ನ ಕಾರಿನ ಇಂಜಿನ್ ಪಾರ್ಟ್ಸ್ ಗಳು ಬೇರೆ ಕಾರಿನಲ್ಲಿ ಇರುವುದು ಗಮನಿಸಿದ್ದಾರೆ. ಈ ಬಗ್ಗೆ ಶೋರೂಂ ಮಾಲಕರು ಕ್ಷಮೆ ಕೇಳಿದ್ದಾರೆ. ಆದರೆ ಸರ್ವಿಸ್ ಗೆ ಇಡಲು ಹೋದಾಗ ಈ ಎಲ್ಲಾ ವಿಚಾರಗಳ ಬಗ್ಗೆ ಜಾಗರೂಕರಾಗಿರೋದು ಉತ್ತಮ ಎಂದು ಗ್ರಾಹಕ ವ್ಯಕ್ತಿ ತಿಳಿಸಿದ್ದಾರೆ.

