ಉಡುಪಿ: ಕರಾವಳಿಯಲ್ಲಿ ಮತ್ತೆ ವರುಣನಾರ್ಭಟ ಹೆಚ್ಚಾಗಿರುವುದರಿಂದ ಹಾಗೂ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಗಟ್ಟಿ ಸಾರ್ವಜನಿಕ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಉಡುಪಿ ಜಿಲ್ಲೆಯ ಐವತ್ತು ಲಕ್ಷದ್ವೀಪಗಳಿಗೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ಡಾ.ಕೆ ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ.
ವಿಪರೀತ ಮಳೆಯ ಕಾರಣದಿಂದ ಸಂಜೆ ಆರರಿಂದ ಬೆಳಿಗ್ಗೆ ಆರರವರೆಗೆ ಜಿಲ್ಲೆಯ ಯಾವುದೇ ದ್ವೀಪಗಳಿಗೆ ಯಾರೊಬ್ಬ ವ್ಯಕ್ತಿಯೂ ಪ್ರವೇಶ ಮಾಡದಂತೆ ನಿರ್ಬಂಧ ಹೇರಲಾಗಿದೆ.
ಕಾನೂನುಬಾಹಿರ ಕೃತ್ಯ ತಡೆಯಲು ಮತ್ತು ಮಳೆಗಾಲಕ್ಕೆ ಯಾವುದೇ ಅಪಾಯ ಎದುರಾಗದಂತೆ ತಡೆಯಲು ಈ ಆದೇಶ ನೀಡಲಾಗಿದೆ. ಉಲ್ಲಂಘಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಡಿಸಿ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.

