ಬದಲಾದ ಜೀವನಶೈಲಿ, ಆಹಾರ ಪದ್ಧತಿಯಿಂದ ಅನೇಕ ರೀತಿಯ ದೈಹಿಕ ಬದಲಾವಣೆಗಳನ್ನು ನಾವು ಕಾಣುತ್ತೇವೆ. ಅತಿಯಾದ ಬೊಜ್ಜು, ಚರ್ಮದ ಸಮಸ್ಯೆ, ಕಡಿಮೆ ವಯಸ್ಸಿನಲ್ಲೇ ಬಿಳಿ ಕೂದಲ ಸಮಸ್ಯೆ ಇಂತಹ ನೂರೆಂಟು ಸಮಸ್ಯೆಗಳು ಇದ್ದೇ ಇರುತ್ತದೆ. ಮುಖ್ಯವಾಗಿ ಈಗ ಯುವಜನತೆಯಲ್ಲಿ ಕೂಡಾ ಈ ಬಿಳಿಕೂದಲ ಸಮಸ್ಯೆ ಕಂಡುಬರುತ್ತದೆ. ಇದರಿಂದ ಒಂದು ಸಮಾರಂಭದಲ್ಲಿ, ಹೆಚ್ಚು ಜನ ಸೇರಿದ್ದಲ್ಲಿ ಭಾಗವಹಿಸಲು ಕೂಡಾ ಮುಜುಗರವಾಗುತ್ತದೆ. ಹೀಗಿರುವಾಗ ಇದಕ್ಕೆ ಮನೆಯಲ್ಲೇ ಸಿಂಪಲ್ ಆಗಿ ಪರಿಹಾರವನ್ನು ಕಂಡುಕೊಳ್ಳಬಹುದು.
ಹೆಚ್ಚಾಗಿ ಬಿಳಿ ಕೂದಲಿಗೆ ಜನರು ಹೆನ್ನಾದಂತಹ ಮೆಹಂದಿಯನ್ನು ಹಚ್ಚುತ್ತಾರೆ. ಬರೀ ಮೆಹಂದಿ ಬಳಸಿದ್ರೆ ಏನೂ ಪ್ರಯೋಜನವಾಗಲ್ಲ. ಬದಲಿಗೆ ಅದಕ್ಕೆ ಕಾಫಿಪುಡಿ ಬೆರೆಸಿದ್ರೆ ಆ ಪೇಸ್ಟ್ ಬಣ್ಣ ಕೂಡಾ ಉತ್ತಮವಾಗಿ ಬರುತ್ತದೆ. ಇದರ ಪ್ಯಾಕನ್ನು ಕೂದಲಿಗೆ, ಕೂದಲಿನ ಬುಡಕ್ಕೆ ಹಚ್ಚಿ ಎರಡು-ಮೂರು ಗಂಟೆಯ ಬಳಿಕ ತಲೆಯನ್ನು ನೀರಿನಿಂದ ಸ್ವಚ್ಛಗೊಳಿಸಬೇಕು.
ತೆಂಗಿನ ಎಣ್ಣೆಯಲ್ಲಿ ಕಾಫಿಪುಡಿ ಬೆರೆಸಿ ಪೇಸ್ಟ್ ಮಾಡಿ ತಲೆಗೆ ಹಚ್ಚುವುದರಿಂದ ಕೂಡಾ ಬಿಳಿಕೂದಲು ಕಪ್ಪಾಗುತ್ತದೆ. ಈ ಎಲ್ಲ ಮನೆಯಲ್ಲೇ ಮಾಡುವ ಸರಳ ವಿಧಾನವನ್ನು ವಾರಕ್ಕೊಮ್ಮೆಯಾದರೂ ಮಾಡುತ್ತಿದ್ದರೆ ಕೂದಲು ಕಪ್ಪಾಗಿ ರೇಷ್ಮೆಯಂತೆ ಹೊಳೆಯುವುದು ಖಂಡಿತ..

