ಗಾಂಧೀನಗರ: ಲಂಡನ್ ನಲ್ಲಿ ಭವಿಷ್ಯದ ಕನಸು ಕಟ್ಟಿಕೊಂಡು ಪ್ರಯಾಣ ಬೆಳೆಸಿದ್ದ ಕುಟುಂಬವೊಂದು ನಿನ್ನೆ ಅಹಮದಾಬಾದ್ ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ದುರಂತ ಅಂತ್ಯ ಕಂಡಿದೆ.
ಸಾಫ್ಟ್ವೇರ್ ವೃತ್ತಿಯಲ್ಲಿದ್ದ ಪ್ರತೀಕ್ ಜೋಶಿ ಅವರು ಆರು ವರ್ಷದಿಂದ ಲಂಡನ್ ನಲ್ಲಿ ವಾಸವಾಗಿದ್ದರು. ತನ್ನ ಹೆಂಡತಿ ಮಕ್ಕಳನ್ನೂ ಅಲ್ಲಿಗೆ ಕರೆತಂದು ಜೀವನ ಸಾಗಿಸುವ ಕನಸು ಈ ದುರಂತದಲ್ಲೇ ಭಗ್ನವಾಯ್ತು..ಇವರ ಹೆಂಡತಿ ಉದಯಪುರದ ಪ್ರಸಿದ್ಧ ವೈದ್ಯೆ ಡಾ.ಕೋಮಿ ವ್ಯಾಸ್ ಮತ್ತು ಮೂವರು ಮುದ್ದಾದ ಮಕ್ಕಳ ಜೊತೆ ಪ್ರಯಾಣ ಬೆಳೆಸಿದ್ದರು.
ಆದರೆ ನಡೆದ ದುರಂತದಲ್ಲಿ ಒಂದೇ ಕುಟುಂಬದ ಐವರೂ ಸಾವನ್ನಪ್ಪಿದ್ದಾರೆ. ವಿಮಾನದಲ್ಲಿ ಕೂತು ಇವರು ಭಾರತದಲ್ಲಿ ಕೊನೆಯ ದಿನ ಎಂದು ಸೆಲ್ಫಿ ಕ್ಲಿಕ್ಕಿಸಿ ಸಂಬಂಧಿಕರಿಗೆ ಕಳಿಸಿ ಖುಷಿಪಟ್ಟಿತ್ತು. ಆದರೆ ವಿಧಿಲಿಖಿತ ಬೇರೇನೇ ಇತ್ತು…ವಿಮಾನ ದುರಂತದಲ್ಲಿ ಒಟ್ಟು ೨೪೧ ಮಂದಿ ಅಸುನೀಗಿದ್ದಾರೆ.

