ನಿನ್ನೆ ಅಹಮದಾಬಾದ್ ನಲ್ಲಿ ನಡೆದ ವಿಮಾನ ಅಪಘಾತದ ದುರಂತ ಮಾಸುವ ಮುನ್ನವೇ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ. ಥಾಯ್ಲೆಂಡ್ ನಲ್ಲಿ ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆ ಥಾಯ್ಲೆಂಡ್ ನ ಫುಕೆಟ್ ನಲ್ಲಿ ತುರ್ತು ಭೂ ಸ್ಪರ್ಶ ಮಾಡಲಾಗಿದೆ.
೧೫೬ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಎಐ-೩೭೯ ವಿಮಾನ ಇದಾಗಿದ್ದು ಫುಕೆಟ್ ನಿಂದ ದೆಹಲಿಗೆ ತೆರಳುವುದರಲ್ಲಿತ್ತು.
ವಿಮಾನದ ಶೌಚಾಲಯದಲ್ಲಿ ಕಂಡುಬಂದ ಬಾಂಬ್ ಬೆದರಿಕೆ ಚೀಟಿ ಕಂಡು ಬಂದ ಹಿನ್ನೆಲೆ ಆತಂಕದಿಂದ ಮತ್ತು ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಲಾಗಿದೆ.

