ಬ್ಯಾಂಕ್ ನಲ್ಲಿ ಉದ್ಯೋಗ ಮಾಡೋದು ಅಂದ್ರೆ ಅನೇಕ ಜನರ ಕನಸಾಗಿರುತ್ತದೆ. ಪದವಿ ಮುಗಿಸಿದ್ರೂ ಅದಕ್ಕೆ ತಕ್ಕಂತೆ ಉದ್ಯೋಗ ಸಿಗದೆ ಅದೆಷ್ಟೋ ಜನರು ಯಾವುದೋ ಸಣ್ಣಪುಟ್ಟ ಕೆಲಸ ಮಾಡ್ಕೊಂಡು ಜೀವನ ಸಾಗಿಸುತ್ತಿರುತ್ತಾರೆ. ಇದೀಗ ಭಾರತದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾಗಿರುವ ಫೆಡರಲ್ ಬ್ಯಾಂಕ್ ನಲ್ಲಿ ಕೆಲವು ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಇಲ್ಲಿ ಸಹಾಯಕ ಅಧಿಕಾರಿ ಹುದ್ದೆ ಖಾಲಿಯಿದ್ದು ಇದಕ್ಕೆ ಅರ್ಜಿ ಸಲ್ಲಿಸುವವರು ಯಾವುದಾದರೂ ಪದವಿಯನ್ನು ಪೂರ್ಣಗೊಳಿಸಿರಬೇಕು. ಇಪ್ಪತ್ತೇಳು ವರ್ಷದ ಒಳಗಿನವರು ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದು.
ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡಲ್ಲಿ ಹುದ್ದೆಗೆ ಅವಕಾಶವಿದ್ದು ಅನ್ಲೈನ್ ಪರೀಕ್ಷೆ ಮತ್ತು ಸಂದರ್ಶನದ ಮುಖೇನ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸಲು ೩೫೦ ರೂಪಾಯಿ ಅರ್ಜಿ ಶುಲ್ಕ ಇರಲಿದೆ. ಕೊನೆಯ ದಿನಾಂಕ ಇದೇ ತಿಂಗಳ ೨೨ ನೇ ತಾರೀಕು ಆಗಿರುತ್ತದೆ.

