ಮಹಿಳೆಯರ ಹಿತದೃಷ್ಟಿಯಿಂದ ಕೆನರಾ ಬ್ಯಾಂಕ್ ಹೊಸದೊಂದು ರೀತಿಯ ಉಳಿತಾಯ ಖಾತೆಯನ್ನು ಪರಿಚಯಿಸಿದೆ. ಕೆನರಾ ಏಂಜೆಲ್ ಎಂದು ಕರೆಯಲ್ಪಡುವ ಈ ಯೋಜನೆಯಲ್ಲಿ ಮೂರು ವಿಧಗಳಿವೆ.
ಗ್ರಾಹಕರ ಜೀವನದಲ್ಲಿ ದುರಾದೃಷ್ಟವಶಾತ್ ಕ್ಯಾನ್ಸರ್ ಬಂದರೆ ಅವರು ಈ ಖಾತೆಯನ್ನು ಹೊಂದಿದ್ದರೆ ಚಿಕಿತ್ಸಾ ವೆಚ್ಚಕ್ಕಾಗಿ ಮೂರರಿಂದ ಹತ್ತು ಲಕ್ಷ ರೂ ಲಭ್ಯವಿರುತ್ತದೆ. ಈ ಖಾತೆ ಹೊಂದಿದ್ದರೆ ಪಾಲಿಸಿಗಳಿಗೆ ಒಂದು ರೂಪಾಯಿ ಖರ್ಚು ಮಾಡದೆ ಈ ಸೌಲಭ್ಯ ಪಡೆಯಬಹುದು.
ಕೆನರಾ ಏಂಜೆಲ್ ಖಾತೆ ಹೊಂದಿದ್ದರೆ 8ರಿಂದ 26ಲಕ್ಷ ಮತ್ತು ಗಂಡನಿಗೆ 2 ಲಕ್ಷಗಳ ಅಪಘಾತ ಮರಣ ವಿಮೆ. ವಾರ್ಷಿಕ ಶುಲ್ಕವಿಲ್ಲದೆ ಉಚಿತ ಪ್ಲಾಟಿನಂ ಎಟಿಎಂ ಕಾರ್ಡ್, ಮಿತಿಯಿಲ್ಲದೆ ಉಚಿತ ಲಾಕರ್ ಕಾರ್ಯಾಚರಣೆ, ಉಚಿತ ಎಸ್ಎಂಎಸ್, ಉಚಿತ ಏರ್ಪೋರ್ಟ್ ಲಾಂಗ್ ಎಕ್ಸೆಸ್ ಇತ್ಯಾದಿ ಸೌಲಭ್ಯಗಳನ್ನು ಪಡೆಯಬಹುದು.
ಕೆನರಾ ಏಂಜೆಲ್ ಖಾತೆ ತೆರೆಯಲು ಎರಡು ಭಾವಚಿತ್ರಗಳು, ಆಧಾರ್ ಕಾರ್ಡ್, ಪಾನ್ ಕಾರ್ಡ್ ಮತ್ತು ಅದರ ಪ್ರತಿಯೊಂದಿಗೆ ಕೆನರಾ ಬ್ಯಾಂಕ್ ಶಾಖೆಗೆ ಭೇಟಿ ನೀಡಿ…

