ಮುಖ್ಯವಾಗಿ ಮಹಿಳೆಯರಿಗೆ ತಮ್ಮ ಚರ್ಮದ ಮೇಲೆ, ಸೌಂದರ್ಯದ ಮೇಲೆ ವಿಶೇಷವಾದ ಗಮನವಿರುತ್ತೆ. ನಾವು ಮುಖದ ಸೌಂದರ್ಯ ಹೆಚ್ಚಿಸಲು ಅದೆಷ್ಟೋ ದುಬಾರಿ ಕ್ರೀಂ, ಟೋನರ್ ಗಳ ಮೊರೆ ಹೋಗ್ತೇವೆ…ಏನೇನೋ ಕ್ರೀಂಗಳನ್ನು ಹಚ್ಚಿಕೊಳ್ತೇವೆ. ಆದರೆ ಅದು ಮುಖ ಅಂದ ಕಾಣಲು ಶಾಶ್ವತವಾದ ಪರಿಹಾರ ಅಲ್ಲ. ರೋಸ್ ವಾಟರ್ ಮೆಡಿಕಲ್ ನಲ್ಲಿ ಸಿಗುವ ಅಗ್ಗದ ಟೋನರ್ ಆಗಿದ್ದು ಇದು ಮುಖದ ಕಾಂತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ರಾತ್ರಿ ಮಲಗುವ ಮುನ್ನ ಇದನ್ನು ಹಚ್ಚಿದರೆ ಕಲೆ, ಮೊಡವೆಗಳಿದ್ದರೆ ಮಾಯವಾಗಿ ತ್ವಚೆಗೆ ಅಗತ್ಯವಾದ ತೇವಾಂಶ ದೊರೆಯುತ್ತದೆ. ರೋಸ್ ವಾಟರ್ ಚರ್ಮದ ಸಮತೋಲನವನ್ನು ಕಾಪಾಡುತ್ತದೆ.
ಇದರಲ್ಲಿ ಬ್ಯಾಕ್ಟೀರಿಯ ವಿರೋಧಿ ಗುಣಗಳಿರುವುದರಿಂದ ತ್ವಚೆಯ ಆರೋಗ್ಯವನ್ನು ವರ್ಧಿಸುತ್ತದೆ. ತ್ವಚೆ ಒಣಗದೆ ಹೈಡ್ರೇಟ್ ಆಗಿರುತ್ತದೆ. ಕಾಟನ್ ಪ್ಯಾಡ್ ಮೇಲೆ ರೋಸ್ ವಾಟರ್ ಹಾಕಿ ಮುಖಕ್ಕೆ ಹಚ್ಚುವುದರಿಂದ ಚರ್ಮದ ಮೇಲಿನ ಧೂಳು, ಕೊಳೆಗಳಿಂದ ಕೂಡಾ ಮುಕ್ತಿ ಸಿಕ್ಕಿ ರಿಫ್ರೆಶ್ ಕಾಣುತ್ತದೆ. ಯಾವುದೇ ಅಡ್ಡ ಪರಿಣಾಮ ಇಲ್ಲದೆ, ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುವ ರೋಸ್ ವಾಟರನ್ನು ಬಳಸುವುದರಿಂದ ಅನೇಕ ರೀತಿಯ ಪ್ರಯೋಜನಗಳಿವೆ.

