ಉಡುಪಿ: ಕರಾವಳಿಯಲ್ಲಿ ಹೆಚ್ಚುತ್ತಿರುವ ಕೋಮುವಾದ, ಹತ್ಯೆ ಪ್ರಕರಣಗಳನ್ನು ನಿಯಂತ್ರಣಕ್ಕೆ ತೆಉ ಉದ್ದೇಶದಿಂದ ರಾಜ್ಯ ಕಾಂಗ್ರೆಸ್ ಸರ್ಕಾರವು ಕೋಮುನಿಗ್ರಹ ಪಡೆಯನ್ನು ರಚಿಸಿದ್ದು ಇದರ ವ್ಯಾಪ್ತಿಗೆ ಉಡುಪಿ ಜಿಲ್ಲೆಯನ್ನು ಕೂಡಾ ಸೇರಿಸಿದ್ದಾರೆ. ಇದನ್ನು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ತೀವ್ರವಾಗಿ ಖಂಡಿಸಿದ್ದಾರೆ.
ಬ್ರ್ಯಾಂಡ್ ಉಡುಪಿಯ ಘನತೆಗೆ ಧಕ್ಕೆ ತರುವ ಕಾರ್ಯ ಸರ್ಕಾರದಿಂದ ಆಗಿದೆ. ಹಿಂದೂ ಕಾರ್ಯಕರ್ತರನ್ನು ದಮನಿಸಲು ಮಾಡುತ್ತಿರುವ ಹುನ್ನಾರವಿದು ಎಂದು ರೊಚ್ಚಗೆದ್ದಿದ್ದಾರೆ.
ಯಾವುದೇ ಕೋಮುಗಲಭೆಗಳಿಲ್ಲದೆ ಶಾಂತಿಯ ತೋಟವಾಗಿರುವ ಉಡುಪಿಯನ್ನು ಈ ರೀತಿ ತೋರಿಸುವುದು ಸರಿಯಲ್ಲ. ಇದು ರಾಜ್ಯ ಗೃಹ ಇಲಾಖೆಯ ವೈಫಲ್ಯಕ್ಕೆ ಹಿಡಿದ ಕನ್ನಡಿ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

