ಕಾರ್ಕಳ: ಮಹಿಳೆಯೊಬ್ಬರು ಆನ್ ಲೈನ್ ವಂಚನೆಯಿಂದ ರೂ. 95ಸಾವಿರ ಹಣ ಕಳೆದುಕೊಂಡ ಘಟನೆ ಕಾರ್ಕಳದಲ್ಲಿ ನಡೆದಿದೆ.
ರೆಂಜಾಳದ ಪಲ್ಲವಿ ಬಿ.ಆರ್. (32) ಆನ್ ಲೈನ್ ವಂಚನೆಯಿಂದ ರೂ. 95ಸಾವಿರ ಕಳೆದುಕೊಂಡ ಮಹಿಳೆ.
ಪಲ್ಲವಿಯವರು ಜೂ. 09ರಂದು ಫೇಸ್ ಬುಕ್ನಲ್ಲಿ ವರ್ಕ ಪ್ರಮ್ ಹೋಂ ಕೆಲಸಕ್ಕೆ ಅಪ್ಲೈ ಮಾಡಿದಾಗ, ಮೊಬೈಲ್ ಟೆಲಿಗ್ರಾಂ ಆಪ್ ಡೌನ್ ಲೋಡ್ ಮಾಡಲು ವಾಟ್ಸಾಪ್ ಮೂಲಕ ಲಿಂಕ್ ಕಳುಹಿಸಿದ್ದು, ಲಿಂಕ್ನ್ನು ಡೌನ್ಲೋಡ್ ಮಾಡಿ ಅಪರಿಚಿತ ವ್ಯಕ್ತಿಯೊಂದಿಗೆ ಟೆಲಿಗ್ರಾಂ ಆಪ್ನಲ್ಲಿ ಸಂವಹನ ನಡೆಸಿ ಅವರು ಕೇಳಿದ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ನೀಡಿದ್ದರು.
ದಿನಕ್ಕೆ 20 ಟಾಸ್ಕ್ ನೀಡುವುದಾಗಿ ಪ್ರತಿ ಟಾಸ್ಕ್ಗೆ ರೂ.10/- ರಂತೆ, 20 ಟಾಸ್ಕ್ ಕೊಡುವುದಾಗಿಯೂ, 20 ಟಾಸ್ಕ್ ನಂತರ 1 ಟಾಸ್ಕ್ಗೆ ರೂ 50/- ರಂತೆ ನೀಡುವುದಾಗಿ ನಂಬಿಸಿ, ಜೂನ್ 10 ರಂದು 3ನೇ ಟಾಸ್ಕ್ಗೆ 800/- ರೂ. ನೀಡುತ್ತೇವೆಂದು ತಿಳಿಸಿದ್ದಾರೆ.
ಪಲ್ಲವಿಯವರು ಆನ್ಲೈನ್ ಮೂಲಕ ತನ್ನ ಕೆನರಾ ಬ್ಯಾಂಕ್ ಕಾರ್ಕಳ ಶಾಖೆಯ ಅಕೌಂಟ್ ನಿಂದ ಹಂತ ಹಂತವಾಗಿ ಒಟ್ಟು ರೂ. 95000/- ವನ್ನು ಅಪರಿಚಿತ ವ್ಯಕ್ತಿಗಳ ಖಾತೆಗೆ ಗೂಗಲ್ ಪೇ ಮೂಲಕ ವರ್ಗಾವಣೆ ಮಾಡಿದ್ದಾರೆ.
ಅಪರಿಚಿತ ವ್ಯಕ್ತಿಗಳು ಹಣ ಹೂಡಿಕೆ ಮಾಡಿದರೆ ಲಾಭಾಂಶ ನೀಡುವುದಾಗಿ ನಂಬಿಸಿ ಮೋಸ ಮಾಡಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

