ಹೆಬ್ರಿ: ದ್ವಿಚಕ್ರ ವಾಹನಕ್ಕೆ ಪಿಕಪ್ ಢಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟ ಘಟನೆ ಗುರುವಾರ ನಡೆದಿದೆ.
ಮೃತರನ್ನು ಚಾರ ತೆಂಕಬೆಟ್ಟು ಸೀತಾರಾಮ ಶೆಟ್ಟಿ (70) ಎಂದು ಗುರುತಿಸಲಾಗಿದೆ.
ಸೀತಾರಾಮ ಶೆಟ್ಟಿ ಅವರು ಟಿವಿಎಸ್ ಲುನಾದಲ್ಲಿ ಜೂ. 19ರಂದು ಚಾರದಿಂದ ಹೆಬ್ರಿ ಕಡೆ ಬರುತ್ತಿರುವಾಗ ಲ್ಯಾಂಪ್ ಸೊಸೈಟಿ ಬಳಿ ಪಿಕಪ್ ಢಿಕ್ಕಿ ಹೊಡೆದಿದೆ ಪರಿಣಾಮ ತಲೆಗೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.

