ಬ್ರಹ್ಮಾವರ: ಮೊಬೈಲ್ ಹೆಚ್ಚಾಗಿ ನೋಡುತ್ತಾಳೆಂಬ ಕಾರಣಕ್ಕೆ ತನ್ನ ಹೆಂಡತಿಯನ್ನು ವ್ಯಕ್ತಿಯೋರ್ವ ಕತ್ತಿಯಿಂದ ಕಡಿದು ಹತ್ಯೆ ಮಾಡಿರುವ ಅಮಾನವೀಯ ಘಟನೆ ಬ್ರಹ್ಮಾವರದ ಹಿಲಿಯಾಣ ಗ್ರಾಮದ ಹೊಸಮಠ ಎಂಬಲ್ಲಿ ನಡೆದಿದೆ.
ಇಪ್ಪತ್ತಾರು ವರ್ಷದ ಪತ್ನಿ ರೇಖಾ ಮೃತ ದುರ್ದೈವಿ. ನಲ್ವತ್ತಮೂರು ವರ್ಷದ ಗಣೇಶ್ ಪೂಜಾರಿ ಹತ್ಯೆ ಆರೋಪಿ. ಮದ್ಯಸೇವನೆ ಮಾಡಿ ಬಂದ ಗಣೇಶ್ ಪತ್ನಿ ವಿಪರೀತವಾಗಿ ಮೊಬೈಲ್ ನೋಡುವ ವಿಚಾರಕ್ಕೆ ಗಲಾಟೆ ಮಾಡಿದ್ದ.
ಗಲಾಟೆ ತಾರಕಕ್ಕೇರಿ ಆಕೆಯನ್ನು ಕತ್ತಿಯಿಂದ ಕಡಿದು ರೇಖಾ ಸಾವನ್ನಪ್ಪಿರೋದು ಖಚಿತವಾದ ಬಳಿಕ ಮನೆಯಿಂದ ಓಡಿದ್ದಾನೆ. ಇದೀಗ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಣೇಶ್ ಪೂಜಾರಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

