ಉಡುಪಿ: ಇತ್ತೀಚಿನ ದಿನಗಳಲ್ಲಿ ಶಾಲಾ ವಾಹನಗಳನ್ನು ಚಾಲಕರು ಅಜಾಗರೂಕತೆಯಿಂದ ಮತ್ತು ನಿರ್ಲಕ್ಷ್ಯದಿಂದ ಚಲಾಯಿಸುತ್ತಿರುವ ಬಗ್ಗೆ ತಿಳಿದುಬಂದಿದ್ದು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ನಿನ್ನೆ ಪೊಲೀಸರು ತಪಾಸಣೆ ನಡೆಸಿದ್ದಾರೆ.
ತಪಾಸಣೆಯಲ್ಲಿ ಪಾನಮತ್ತ ಚಾಲನೆ, ಸರಿಯಾದ ದಾಖಲೆ ಹೊಂದದೆ ಇರುವ ಬಗ್ಗೆ, ಓವರ್ ಲೋಡ್ ಹೊಂದಿರುವ ಬಗ್ಗೆ ಒಟ್ಟು ೨೮೨ ಪ್ರಕರಣಗಳನ್ನು ದಾಖಲಿಸಿ ಒಟ್ಟು ಒಂದು ಲಕ್ಷದ ಐವತ್ತೆಂಟು ಸಾವಿರ ಫೈನ್ ಹಾಕಿದ್ದಾರೆ.
ಸಂಬಂಧಪಟ್ಟ ಶಾಲಾ ಆಡಳಿತ ಮಂಡಳಿ ಶಾಲೆಯ ಎಲ್ಲಾ ವಾಹನಗಳ ದಾಖಲಾತಿ ಸೇರಿದಂತೆ ಮುಂಜಾಗ್ರತಾ ಕ್ರಮ ವಹಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.

