ನಮಸ್ಕಾರ ದೇವ್ರು ಎನ್ನುವ ಮೂಲಕ ವೀಕ್ಷಕರನ್ನು ಸ್ವಾಗತಿಸಿ ವೀಡಿಯೋ ಮಾಡುವ ಡಾ. ಬ್ರೋ ಅಲಿಯಾಸ್ ಗಗನ್ ಅವರಿಗೆ ಅದೆಷ್ಟೋ ಸಾವಿರ ಅಭಿಮಾನಿಗಳಿದ್ದಾರೆ. ದೇಶ ವಿದೇಶ ಸುತ್ತಿ ಅಲ್ಲಿಯ ಪ್ರತೀ ಮಾಹಿತಿಯನ್ನು ಅಚ್ಛ ಕನ್ನಡದಲ್ಲಿ ನಮ್ಮ ಹೃದಯ ಮುಟ್ಟುವಂತೆ ವಿವರಿಸುತ್ತಿದ್ದ ಇವರು ನಾಲ್ಕು ತಿಂಗಳಿಂದ ವೀಡಿಯೋ ಹಾಕಿಲ್ಲ. ಹೀಗಾಗಿ ಅಭಿಮಾನಿಗಳು ಡಾ. ಬ್ರೋ ಯಾಕೆ ವೀಡಿಯೋ ಹಾಕ್ತಿಲ್ಲ ಎಂಬುವುದನ್ನೇ ಮತ್ತೆ ಮತ್ತೆ ಕೇಳುತ್ತಿದ್ದಾರೆ.
ಸದ್ಯ ಗಗನ್ ಯೂಟ್ಯೂಬರ್ ಜೊತೆಗೆ ಉದ್ಯಮಿಯೂ ಆಗಿದ್ದಾರೆ. ಗೋ ಪ್ರವಾಸ ಎಂಬ ಕಂಪೆನಿ ಆರಂಭಿಸಿದ್ದು ಪ್ಯಾಕೇಜ್ ಮುಖೇನ ವಿದೇಶಿ ಪ್ರಯಾಣವನ್ನು ಒದಗಿಸುತ್ತಿದ್ದಾರೆ.
ಇಲ್ಲಿಯವರೆಗೆ ಡಾ.ಬ್ರೋ ತಮ್ಮ ಚಾನೆಲ್ ನಲ್ಲಿ ನೂರ ಎಪ್ಪತ್ತು ವೀಡಿಯೋಗಳನ್ನು ಅಪ್ಲೋಡ್ ಮಾಡಿದ್ದು ೨.೮ ಮಿಲಿಯನ್ ಚಂದಾದಾರನ್ನು ಹೊಂದಿದ್ದಾರೆ.


