ಉಡುಪಿ: ಬಾಡಿಗೆ ಮಾಡುವ ವಿಚಾರದಲ್ಲಿ ಆಟೋ ಯೂನಿಯನ್ ಗಳ ನಡುವೆ ವಿವಾದ ನಡೆಯುತ್ತಿದ್ದು ಅದರ ಮುಂದುವರೆದ ಭಾಗವಾಗಿ ಕೆಲವು ಚಾಲಕರು ಸೇರಿ ಓರ್ವ ರಿಕ್ಷಾ ಚಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಉಡುಪಿಯ ಬಿಗ್ ಬಜಾರ್ ಸಮೀಪದ ಪಾರ್ಕಿಂಗ್ ನಲ್ಲಿ ನಡೆದಿದೆ.
ಪ್ರಸಾದ್ ಎಂಬಾತ ಹಲ್ಲೆಗೊಳಗಾದ ಚಾಲಕ. ರಾಘು ಮತ್ತು ಸಹಚರರು ಹಲ್ಲೆ ನಡೆಸಿರೋದಾಗಿ ಸಹೋದ್ಯೋಗಿಗಳು ಆರೋಪಿಸಿದ್ದಾರೆ. ಚಾಲಕ ಪ್ರಸಾದ್ ಅಜ್ಜರಕಾಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಗರ ವ್ಯಾಪ್ತಿಯಲ್ಲಿ ಎಲ್ಲಿ ಬೇಕಾದರೂ ಬಾಡಿಗೆ ಮಾಡಬಹುದು ಎಂದು ಪೊಲೀಸ್ ಇಲಾಖೆ, ನಗರಸಭೆಯ ಪರ್ಮಿಷನ್ ಇದ್ರೂ ಕೆಲವು ಯೂನಿಯನ್ ಗಳು ಬಾಡಿಗೆ ಮಾಡಲು ಬಿಡದೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಿಕ್ಷಾ ಚಾಲಕರು ಒತ್ತಾಯಿಸಿದ್ದಾರೆ.

