ಕುಂದಾಪುರ ತಾಲ್ಲೂಕಿನಲ್ಲೇ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿರುವ ಯಡಾಡಿ-ಮತ್ಯಾಡಿಯಲ್ಲಿರುವ ಸುಜ್ಞಾನ್ ಎಜ್ಯುಕೇಶನಲ್ ಟ್ರಸ್ಟ್ ನ ಭಾಗವಾಗಿರುವ ಹೆಮ್ಮೆಯ ಸಂಸ್ಥೆ ಸುಜ್ಞಾನ ಪದವಿ ಪೂರ್ವ ಕಾಲೇಜು ಮತ್ತು ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಉದ್ಯೋಗವಕಾಶವಿದ್ದು ಅನೇಕ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಚಿತ್ರಕಲಾ ಶಿಕ್ಷಕರು, ಯೋಗ ಶಿಕ್ಷಕರು, ಮೇಲ್ವಿಚಾರಕರು, ವಾಚ್ ಮೆನ್, ಪ್ಲಂಬರ್ ಮತ್ತು ಎಲೆಕ್ಟ್ರಿಷಿಯನ್, ಆಫೀಸ್ ಅಸಿಸ್ಟೆಂಟ್, ರಿಸೆಪ್ಶನಿಸ್ಟ್, ಅಟೆಂಡರ್ ಹುದ್ದೆಗೆ ಅಭ್ಯರ್ಥಿಗಳನ್ನು ನೇಮಕ ಮಾಡಲಾಗುತ್ತಿದೆ. ಮತ್ತು ವಾರ್ಡನ್ಸ್ ಹುದ್ದೆಗೆ ಪುರುಷ ಅಭ್ಯರ್ಥಿ, ಸಂಜೆ 6.30ರಿಂದ 11.30ರವರೆಗೆ ಕೆಲಸ ಮಾಡಲು ಕ್ಲೀನರ್ಸ್ ಕೂಡಾ ಬೇಕಾಗಿದ್ದಾರೆ.
ಅಲ್ಲದೆ ತಲ್ಲೂರ್-ಕೆಂಚನೂರ್, ಕೆದೂರು-ಬೇಳೂರು, ನೀಲಾವರ, ಆರ್ಡಿ, ಆವರ್ಸೆ-ಮಂದಾರ್ತಿ, ಕರ್ಕಿ-ನೇರಳಕಟ್ಟೆ, ಕೋಟೇಶ್ವರ, ಅಮಾಸೆಬೈಲು, ಬೈಂದೂರು, ಬ್ರಹ್ಮಾವರ ಇತ್ಯಾದಿ ಸ್ಥಳಗಳಿಗೆ ಶಾಲಾ ವಾಹನ ಚಾಲಕರು ಕೂಡಾ ಬೇಕಾಗಿದ್ದಾರೆ. ಆಸಕ್ತರು ಅರ್ಜಿ ಸಲ್ಲಿಸಬಹುದು.
ತಕ್ಷಣವೇ ನೇಮಕಾತಿ ಮಾಡಲಾಗುತ್ತಿದ್ದು ಆಯ್ಕೆಯಾದ ಅಭ್ಯರ್ಥಿಗಳಿಗೆ ಉತ್ತಮ ವೇತನ ಮತ್ತು ಇತರ ಸೌಲಭ್ಯಗಳನ್ನು ನೀಡಲಾಗುತ್ತದೆ. ಆಸಕ್ತರು 9964291755 ಅಥವಾ 9740932487 ಈ ನಂಬರಿಗೆ ಸಂಪರ್ಕಿಸಬಹುದು. ಅಥವಾ ವಿದ್ಯಾರಣ್ಯ ಕ್ಯಾಂಪಸ್ ಯಡಾಡಿ-ಮತ್ಯಾಡಿ, ಕುಂದಾಪುರ ತಾಲ್ಲೂಕು ಉಡುಪಿ ಜಿಲ್ಲೆ ಇಲ್ಲಿಗೆ ಕೂಡಾ ಭೇಟಿ ನೀಡಬಹುದು.


