ಶಿವಮೊಗ್ಗ: ಮದುವೆಗೆ ಮುನ್ನವೇ ಗರ್ಭವತಿಯಾಗಿದ್ದ ತನ್ನ ಮಗಳನ್ನು ಮರ್ಯಾದೆಗೆ ಅಂಜಿ ಸ್ವತಃ ತಂದೆಯೇ ಹತ್ಯೆ ಮಾಡಲು ಯತ್ನಿಸಿದ ಘಟನೆ ಶಿವಮೊಗ್ಗದ ಸೊರಬದಲ್ಲಿ ನಡೆದಿದೆ.
ಧರ್ಮಾ ನಾಯ್ಕ್ ಹತ್ಯೆಗೆ ಯತ್ನಿಸಿದ ಆರೋಪಿ ತಂದೆ. ಇಪ್ಪತ್ತೊಂದು ವರ್ಷದ ಮಗಳು ಗರ್ಭಿಣಿ ಎಂದು ಗೊತ್ತಾದ ಮೇಲೆ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುವ ನೆಪದಲ್ಲಿ ಒಂದು ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಕೊಲೆಗೆ ಯತ್ನಿಸಿದ್ದಾರೆ.
ಹೆಂಡತಿ ಎಷ್ಟು ಹೇಳಿದರೂ ಕೇಳದೆ ಈ ಕೃತ್ಯ ಎಸಗಿದ್ದಾನೆ. ಯುವತಿ ಪ್ರಜ್ಞೆ ತಪ್ಪಿ ಬಿದ್ದಿದ್ದು ಆಕೆ ಸತ್ತಿದ್ದಾಳೆ ಎಂದು ಭಾವಿಸಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ನಂತರ ಯುವತಿಗೆ ಪ್ರಜ್ಞೆ ಬಂದು ರಸ್ತೆವರೆಗೂ ನಡೆದು ಬಂದು ಸ್ಥಳೀಯರ ಸಹಾಯದಿಂದ ಆಸ್ಪತ್ರೆ ಸೇರಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

