ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಆದರೆ ರೈಲು ಪ್ರಯಾಣಿಕರಿಗೆ ಬೇಸರದ ಸುದ್ದಿಯೊಂದು ಕೇಳಿಬಂದಿದೆ. ಎಸಿ ಕೋಚ್ ಅಥವಾ ಸ್ಲೀಪರ್ ಕೋಚ್ ನಲ್ಲಿ ಪ್ರಯಾಣ ಮಾಡುವವರ ಟಿಕೆಟ್ ದುಬಾರಿಯಾಗಲಿದೆ.
ಐದು ವರ್ಷಗಳ ನಂತರ ಮತ್ತೆ ರೈಲ್ವೇ ದರದಲ್ಲಿ ಪರಿಷ್ಕರಣೆ ಮಾಡಲಾಗಿದೆ. ಈ ಬಾರಿ ಗರಿಷ್ಠ ದರವನ್ನು ಕಿಲೋಮೀಟರ್ಗೆ 2 ಪೈಸೆ ಹೆಚ್ಚಿಸಲಾಗಿದೆ. ಎಸಿ ಅಲ್ಲದ ರೈಲುಗಳಲ್ಲಿ 500 ಕಿ.ಮೀ ವರೆಗಿನ ಎರಡನೇ ದರ್ಜೆಯ ಪ್ರಯಾಣ ದರದಲ್ಲಿ ಯಾವುದೇ ಹೆಚ್ಚಳ ಇರುವುದಿಲ್ಲ.
ವಂದೇ ಭಾರತ್, ಶತಾಬ್ದಿ, ರಾಜಧಾನಿ, ತೇಜಸ್, ಡುರೊಂಟೊ, ಗರೀಬ್ ರಥ ಮುಂತಾದ ಪ್ರೀಮಿಯಂ ರೈಲುಗಳ ದರವನ್ನು ಸಹ ಹೆಚ್ಚಿಸಲಾಗಿದೆ. ಇವುಗಳಲ್ಲಿ ಅನುಭೂತಿ ಮತ್ತು ವಿಸ್ಟಾಡೋಮ್ ಕೋಚ್ಗಳು ಸಹ ಸೇರಿವೆ. ಉಪನಗರ ರೈಲುಗಳ ದರವನ್ನು ಹೆಚ್ಚಿಸಿಲ್ಲ. ಸೀಸನ್ ಟಿಕೆಟ್ಗಳ ದರ ಸಹ ಹೆಚ್ಚಿಸಲಾಗಿಲ್ಲ. ಜಿಎಸ್ಟಿ ಕೂಡ ಮೊದಲಿನಂತೆಯೇ ಅನ್ವಯವಾಗುತ್ತದೆ.

