ಬಯಲು ಬಹಿರ್ದೆಸೆ ಮುಕ್ತ ಸ್ಥಿತಿ ಹಾಗೂ ಘನ ಮತ್ತು ದ್ರವ ತ್ಯಾಜ್ಯದ ಸಮರ್ಪಕ ನಿರ್ವಹಣೆಗೆ ವ್ಯವಸ್ಥೆಯನ್ನು ಹೊಂದುವ ಮೂಲಕ ಉಡುಪಿ ರಾಜ್ಯದ ಮೊಟ್ಟಮೊದಲ ಓಡಿಎಫ್ ಪ್ಲಸ್ ಮಾದರಿ ಜಿಲ್ಲೆಯಾಗಿ ಹೊರಹೊಮ್ಮಿದೆ.
ಇದು ಉಡುಪಿಗರಿಗೆ ಹೆಮ್ಮೆ ತರುವ ವಿಚಾರವಾಗಿದೆ. ಈ ಮೂಲಕ ಇಡೀ ರಾಜ್ಯಕ್ಕೆ ಉಡುಪಿ ಜಿಲ್ಲೆಯು ಮಾದರಿಯಾಗಿ ನಿಂತಿದೆ.
ನೈರ್ಮಲ್ಯ ಅಭ್ಯಾಸಗಳನ್ನು ಪಾಲಿಸುವ ಮೂಲಕ ಈ ವಿಶೇಷ ಸಾಧನೆಗೆ ಕಾರಣರಾದ ಉಡುಪಿ ಜಿಲ್ಲೆಯ ಜನತೆಗೆ ಮತ್ತು ಜಿಲ್ಲಾಡಳಿತಕ್ಕೆ ಗ್ರಾಮೀಣ ಕುಡೊಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಅಭಿನಂದನೆ ಸಲ್ಲಿಸಲಾಗಿದೆ.


