ಗಂಗೊಳ್ಳಿ: ಯುವಕನೋರ್ವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೇನಾಪುರ ರೈಲು ನಿಲ್ದಾಣ ಸಮೀಪದ ನಾಡ ಗ್ರಾಮದ ನಾಡ ಗುಡ್ಡೆಯಂಗಡಿ ಬಳಿಯ ರೈಲು ಹಳಿಯಲ್ಲಿ ನಡೆದಿದೆ.
ಜರ್ಜರಿತವಾದ ಸ್ಥಿತಿಯಲ್ಲಿ ಸಿಕ್ಕ ಮೃತದೇಹ ರಾಮನಗರ ನಿವಾಸಿ ಶಶಾಂಕ್ ಭಂಡಾರಿ (೨೯) ಅವರದ್ದು ಎಂಬ ಗುರುತು ಪತ್ತೆಯಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಖಾಸಗಿ ಕಂಪೆನಿಯಲ್ಲಿ ವರ್ಕ್ ಫ್ರಂ ಹೋಂ ಕೆಲಸ ಮಾಡುತ್ತಿದ್ದ ಶಶಾಂಕ್ ಶನಿವಾರ ಮನೆಯಿಂದ ಹೋದವರು ನಾಪತ್ತೆಯಾಗಿದ್ದರು. ಇದೀಗ ಶವವಾಗಿ ಪತ್ತೆಯಾಗಿದ್ದು ಗಂಗೊಳ್ಳಿ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

