ಉಡುಪಿ: ಹಾಸ್ಟೆಲ್ ನಲ್ಲಿದ್ದ ಮಣಿಪಾಲ ಕಾಲೇಜೊಂದರ ವಿದ್ಯಾರ್ಥಿಯೊಬ್ಬ ನಾಪತ್ತೆಯಾದ ಘಟನೆ ನಡೆದಿದೆ.
ರಾಜಸ್ಥಾನದ ನಿವಾಸಿ ಜೀತ್ರೇಂದ್ರ ಕುಮಾರ್ ಅವರ ಮಗ ಮಣಿಪಾಲ ಎಂಎಸ್ಎಪಿ ಹಾಸ್ಟೇಲಿನಲ್ಲಿರುವ ಸಿದ್ದಾರ್ಥ ಕಾರ್ವಾಲ್ (23) ನಾಪತ್ತೆಯಾದ ವಿದ್ಯಾರ್ಥಿ.
ಜುಲೈ7 ರಂದು ಬೆಳಿಗ್ಗೆ ಎಂಟು ಗಂಟೆಗೆ ತಂದೆ ಹಾಸ್ಟೆಲ್ ಗೆ ಮಗನನ್ನು ನೋಡಲು ಬಂದಾಗ ಹಾಸ್ಟೇಲಿನ ರೂಮಿನಲ್ಲಿ ಆತ ಇರಲಿಲ್ಲ. ರೂಮಿನಲ್ಲಿ ಬಟ್ಟೆ ಹಾಗೂ ಮೊಬೈಲ್ ಮಾತ್ರ ಇತ್ತು
ನಂತರ ಕೇರ್ ಟೇಕರ್ ಬ್ಲಾಕ್ 10 ಕೌಂಟರಿಗೆ ಹೋಗಿ ವಿಚಾರಿಸಿದಾಗ ಆತ ಜುಲೈ6 ರಂದು ರಾತ್ರಿ 10.30 ಗಂಟೆಗೆ ಹೋಗಿರುವುದಾಗಿ ತಿಳಿಸಿದ್ದಾರೆ. ವಿದ್ಯಾರ್ಥಿ ಹಾಸ್ಟೇಲಿಗೂ ಬರದೇ ಮನೆಗೂ ಹೋಗದೇ ಕಾಣೆಯಾಗಿರುತ್ತಾರೆ.
ಮಣಿಪಾಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

