ಕಳೆದ ವಾರವಷ್ಟೆ ಬಿಡುಗಡಡಯಾಗಿದ್ದ ಮೂರು ನಿಮಿಷದ ರಾಮಾಯಣ ಚಿತ್ರದ ಟೀಸರ್ ಎಲ್ಲರನ್ನೂ ಅಚ್ಚರಿಗೊಳಿಸಿತ್ತು. ಇದೀಗ ರಾಮಾಯಣ ಚಿತ್ರದ ನಟ ಯಶ್ ಅವರ ರಾವಣ ಪಾತ್ರಕ್ಕೆ ನಟ ಹಾಗೂ ನಿರ್ದೇಶಕ ರಾಜ್ ಬಿ ಶೆಟ್ಟಿ ಅವರು ಹಾಡಿ ಹೊಗಳಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಕನ್ನಡದ ಕವಿಯೊಬ್ಬರು ತಮ್ಮ ಪ್ರತಿನಾಯಕನನ್ನು ಸಮರ್ಥಿಸಿಕೊಳ್ಳುತ್ತಾರೆ, ಮಹಾ ಸಾಗರವು ಕಾಲದ ಕಾರಣದಿಂದಾಗಿ ತನ್ನ ಮಿತಿಗಳನ್ನು ದಾಟುತ್ತದೆ, ಸುನಾಮಿಯಂತಹ ಘಟನೆಗಳನ್ನು ತರುತ್ತದೆ ಎಂದು ಹೇಳುತ್ತಾರೆ. ಅವರ ಪ್ರತಿನಾಯಕ ರಾವಣ. ನಾನು ಭಾವಿಸುತ್ತೇನೆ, ಮೊದಲ ಬಾರಿಗೆ, ನಾವು ನಮ್ಮ ರಾವಣನನ್ನು ರಕ್ಷಿಸಲು ಪ್ರತಿಜ್ಞೆ ಮಾಡುತ್ತೇವೆ” ಎಂದು ರಾಜ್ ಬಿ ಶೆಟ್ಟಿ ಬರೆದುಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ನಟ ಯಶ್ ಅವರು ಧನ್ಯವಾದಗಳು, ಶೆಟ್ರೆ! ರಾಮಾಯಣ, ಸರಿ ಮತ್ತು ತಪ್ಪುಗಳನ್ನು ಮೀರಿ” ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಈ ಪೋಸ್ಟ್ ಸಖತ್ ವೈರಲ್ ಆಗ್ತಾ ಇದೆ.

