ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮಿ ಯೋಜನೆ ಕೂಡಾ ಒಂದು. ಮಹಿಳೆಯರಿಗೆ ಇದರಿಂದ ಪ್ರಯೋಜನಗಳು ಕೂಡಾ ಆಗಿದೆ. ಆದರೆ ಶಾಕಿಂಗ್ ನ್ಯೂಸೊಂದು ಸಿಕ್ಕಿದ್ದು ಮಹಿಳೆಯರಿಗೆ ಬೇಸರ ತಂದಿದೆ.
ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿರುವ ಗ್ಯಾರಂಟಿ ಸಮಿತಿ ಅಧ್ಯಕ್ಷ ಹೆಚ್.ಎಂ ರೇವಣ್ಣ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಡಿ ಪ್ರತೀ ತಿಂಗಳು ಹಣ ಹಾಕಲು ಕೆಲವು ತೊಡಕುಗಳಿವೆ. ಇದೀಗ ಮೂರು ತಿಂಗಳಿಗೊಮ್ಮೆ ಹಾಕುತ್ತಿದ್ದೇವೆ ಎಂದಿದ್ದಾರೆ.
ಜಿಎಸ್ ಟಿ ಸಮಸ್ಯೆ ಕೂಡಾ ತಲೆದೋರುತ್ತಿದ್ದು ಇನ್ಮುಂದೆ ಪ್ರತೀ ತಿಂಗಳು ಖಾತೆಗೆ ಹಣ ಹಾಕುವುದು ಕಷ್ಟ ಎಂದಿದ್ದಾರೆ. ಇದರಿಂದ ಮಹಿಳೆಯರಿಗೆ ನಿರಾಶೆಯಾಗಿದ್ದು ಸರ್ಕಾರದ ಮುಂದಿನ ಬೆಳವಣಿಗೆ ನೋಡಬೇಕಷ್ಟೆ.

