ಮಂಗಳೂರು: ಬೆಂಗಳೂರಿನ ಸೈಬರ್ ಅಪರಾಧ ಅಧಿಕಾರಿಯಂತೆ ನಟಿಸಿ ಫೇಸ್ಬುಕ್ ಬಳಕೆದಾರರಿಗೆ 1.23 ಲಕ್ಷ ರೂ. ಪಂಗನಾಮ ಹಾಕಿದ ಆರೋಪದ ಮೇಲೆ ತುಮಕೂರಿನ ಸೈಬರ್ ಅಪರಾಧಿಯೊಬ್ಬನನ್ನು ಮಂಗಳೂರು ಕೇಂದ್ರ ಅಪರಾಧ ಪೊಲೀಸರು ಬಂಧಿಸಿದ್ದಾರೆ.
ಅರುಣ್ ಟಿ (27) ಬಂಧಿತ ಆರೋಪಿ. ಪೊಲೀಸರ ಪ್ರಕಾರ, ಆರೋಪಿಯು ಪೇಸ್ ಬುಕ್ ಖಾತೆ, ಕನ್ನಡ ಮಾಡೆಲ್ಸ್ , ಟ್ರೋಲ್ ಮಾಸ್ಟರ್ , ಟ್ರೋಲ್ ಬಸ್ಯಾ ಇತ್ಯಾದಿ ಪೇಜ್ ಗಳಲ್ಲಿ ಕಮೆಂಟ್ಸ್ ಹಾಕಿರುವ ವ್ಯಕ್ತಿಗಳಿಗೆ ಕರೆಮಾಡಿ ಸೈಬರ್ ಕ್ರೈಂ ಪೊಲೀಸ್ ಬೆಂಗಳೂರು ಸುಶೀಲ್ ಕುಮಾರ ಎಂದು ಹೇಳಿ ತನ್ನನ್ನು ಪರಿಚಯಿಸಿಕೊಂಡು ನಿಮ್ಮ ಮೇಲೆ ದೂರುಗಳು ಬಂದಿದೆ ನಿಮ್ಮನ್ನು ಅರೆಸ್ಟ್ ಮಾಡುತ್ತೇನೆ ಎಂದು ಹೆದರಿಸಿ ಸಾರ್ವಜನಿಕರಿಂದ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಳ್ಳುತ್ತಿದ್ದ ಎಂದು ವರದಿಯಾಗಿದೆ.
ದೂರುದಾರರನ್ನು ಹೆದರಿಸಿ ಅರುಣ್ ಅವರ ಬ್ಯಾಂಕ್ ಖಾತೆಗೆ 1.23 ಲಕ್ಷ ರೂ.ಗಳನ್ನು ವರ್ಗಾಯಿಸಿದ್ದಾನೆ. ಆರೋಪಿತನ ಮೇಲೆ ಸೈಬರ್ ಪೊರ್ಟಲ್ ನಲ್ಲಿ ಒಟ್ಟು 11 ದೂರುಗಳು ದಾಖಲಾಗಿದೆ. ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣದ ಬಗ್ಗೆ ತನಿಖೆ ನಡೆಸಿ ಮಾಹಿತಿ ಕಲೆ ಹಾಕಿ ಆರೋಪಿತನನ್ನು ತುಮಕೂರಿನಲ್ಲಿ ಬಂಧಿಸಿ ಈ ದಿನ ಮಾನ್ಯ ನ್ಯಾಯಾಲಯದ ಮುಂದೆ ಹಾಜರಿಪಡಿಸಿದ್ದು ಮಾನ್ಯ ನ್ಯಾಯಾಲಯವು ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.


