ಉಡುಪಿ: ಈ ಬಾರಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕೃಷ್ಣ ಮಠದಲ್ಲಿ ಮಂಡಲೋತ್ಸವವನ್ನು ಅದ್ದೂರಿಯಾಗಿ ನಡೆಸಲು ಚಿಂತನೆ ನಡೆಸಿದ್ದು ಈ ಹಿನ್ನೆಲೆ ಕೋಟಿ ಶ್ರೀ ಕೃಷ್ಣ ಮಂತ್ರ ಜಪ, ಧಾರ್ಮಿಕ ಪ್ರವಚನ, ಗೀತೋತ್ಸವ ವಿವಿಧ ಸ್ಪರ್ಧೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿದೆ ಎಂದು ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.
ಜು.೨೫ರಂದು ರಾಜಾಂಗಣದಲ್ಲಿ ನಡೆಯುವ ಈ ಉತ್ಸವಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಚಾಲನೆ ನೀಡಲಿದ್ದಾರೆ. ಆ.1ರಿಂದ 17ರವರೆಗೆ ಮಂಡಲೋತ್ಸವ ನಡೆಯಲಿದೆ.
ಆ.೧೫ರಂದು ನಡೆಯುವ ಗೀತೋತ್ಸವಕ್ಕೆ ಅಯೋಧ್ಯೆ ಶ್ರೀ ಜನ್ಮಭೂಮಿ ತೀರ್ಥ ಕ್ಷೇತ್ರದ ಖಜಾಂಚಿ ಗೋವಿಂದದಾಸ್ ಗಿರಿ ಮಹಾರಾಜ್ ಆಗಮಿಸಲಿದ್ದು ಆ ದಿನ ಒಂದು ಲಕ್ಷ ಜನ ಒಟ್ಟಾಗಿ ಭಗವದ್ಗೀತೆ ಪಠಣ ಮಾಡಲಿದ್ದಾರೆ. ಆ ದಿನ ಭಕ್ತರು ಶ್ರೀಕೃಷ್ಣ ದೇವರಿಗೆ ಉಡುಗೊರೆ ನೀಡಬಹುದು ಎಂದು ಪರ್ಯಾಯ ಶ್ರೀಪಾದರು ಹೇಳಿದರು.


