ವಿ. ಎಸ್.ಎಸ್ ಶಾಲೆ ಮುದ್ದೂರಿನಲ್ಲಿ ದಿನಾಂಕ 23/೦7/2025 ರಂದು ವಿದ್ಯಾರ್ಥಿ ಪಾರ್ಲಿಮೆಂಟ್ ಪದಗ್ರಹಣ ಸಮಾರಂಭ ನೆರವೇರಿತು. ಸಮಾರಂಭದಲ್ಲಿ ಹೊಸದಾಗಿ ಆಯ್ಕೆಯಾದ ವಿದ್ಯಾರ್ಥಿ ನಾಯಕರಿಗೆ ಬ್ಯಾಡ್ಜ್ ಗಳನ್ನುನೀಡಲಾಯಿತು. ಮತ್ತು ಪ್ರೌಢ ಶಾಲಾ ವಿಭಾಗದ ಪ್ರಾಂಶುಪಾಲೆ ಭಾರತಿ ಅವರು ಪ್ರಮಾಣ ವಚನ ಭೋಧಿಸಿದರು. ಆಡಳಿತಾಧಿಕಾರಿ ಹೆರಾಲ್ಡ್ ಬಿ ಲೆವಿಸ್ ಅವರು ನಾಯಕತ್ವದ ಜವಾಬ್ದಾರಿಗಳನ್ನು ತಿಳಿಸಿದರು.

ಶಾಲಾ ಮುಖ್ಯಸ್ಥರಾದ ಪ್ರತಾಪ್ ಹೆಗ್ಡೆ ಮಾರಾಳಿ ಇವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಶಾಲೆಯ ಘನತೆಯನ್ನು ಎತ್ತಿ ಹಿಡಿಯುವಂತೆ ಕರೆ ನೀಡಿದರು.
ಶಾಲಾ ಶಿಕ್ಷಕಿಯರಾದ ಪ್ರಥ್ವಿ ಸ್ವಾಗತಿಸಿ, ಪಾವನ ವಂದಿಸಿದರು. ಮಾರ್ಗರೆಟ್ ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರಾಥಮಿಕ ವಿಭಾಗದ ಪ್ರಾಂಶುಪಾಲೆ ಅಮಿತಾ ಉಪಸ್ಥಿತರಿದ್ದರು.


